TIGHT BINGING BOOK

UNIVERSAL LIBRARY

OU 198611

AdVddl | IVSHAINN

ಗೀತಾ ಸಾಹಿತ್ಯ ಮಾಲೆ-೬,

ಸಾಗರದಾಜೆ

(ಪ್ರವಾಸ ಸಾಹಿತ್ಯ)

ನಾಡಿಗೆ ಕೃಷ್ಣಮೂರ್ತಿ

ಗೀತಾ ಸಾಹಿತ್ಯ ಮಂದಿರ ಮಲ್ಲೇಶ್ವರಂ : : ಬೆಂಗಳೂರು-೩.

ಮೆಂಬರ್‌ ೧೯೫.೨.

Ke! 2 2 2 ತ್‌ ಕ್ರ 2 “2೬

ಬೆಲೆ ೨-೪-೦

ಪ್ರಕಾಶಕರು: ಗೀತಾ ಸಾಹಿತ್ಯ ಮಂದಿರ ಮಲ್ಲೇಶ್ವರಂ : : ಬೆಂಗಳೂರು-೩.

ಮುದ್ರಕರು ;.

ಶ್ರೀವತ್ಸ ಪ್ರೆಸ್‌, ರಾಯಸೇಟೈ, ಮುದೆರಾಸು-೧೪-

ಇದೇ ಲೇಖಕರ ಇತರ ಪುಸ್ತಕಗಳು

ಬಾ

ಬಾಸೂಜಿ

ಸರ್ದಾರ್‌ ಪಬೇಲ್‌

ಬಾಪೂ ದರ್ಶನ

ಕಮಲ ನೆಹರು

ಸರೋಜಿನಿ ನಾಯ್ಡು

ಜೆ ಪ್ರಕಾಶ್‌ ನಾರಾಯಣ್‌ ಶಕರ್ನಾಟಕದೆ ಆಗಸ್ಟ್‌ ವೀರರು ಶಾಂತಿಯ ಸಾರ್ವ ಭೌಮರು ನಮ್ಮ ಕಾಗದಗಳು ರಾಷ್ಟ್ರೀಯ ಚಾರಿತ್ರ 3 ಭಾರತದ ವೀರ ರಮಣಿಯರು

ಅರಿಕೆ

ಸಾಗರದೀಚೆ ಬಂದು ನಾಲ್ಕು ವರ್ಷಗಳಾದರೂ, ಸಾಗರದಾಚೆ ಇನ್ನೂ ಏಕೆ ಬರಲಿಲ್ಲ ಎಂದು ಆಗಾಗ್ಗೆ ಕೇಳುತ್ತಿದ್ದ ನನ್ನ ಸ್ನೇಹಿತರಿಗೆ, “ಇಗೋ ಬಂತ್ತು ತೆಗೆದುಕೊಳ್ಳಿ ಎಂದು ಪುಸ್ತಕವನ್ನು ಕೊಡುತ್ತಿದ್ದೇನೆ. ಅನೇಕ ಕಾರಣಗಳಿಂದ ಪುಸ್ತಕವು ಜಾಗ್ರತೆಯಾಗಿ ಹೊರಬೀಳಲು ಅವ ಕಾಶನಾಗಲಿಲ್ಲ. ತಪ್ಪು ನನ್ನದೇ.

ನಮ್ಮ ಕಾಗದಗಳ ನ್ನು ಹರಸುತ್ತಾ, ಹಿರಿಯರಾದ ಶ್ರೀ ಡಿ.ನಿ. ಗುಂಡಪ್ಪನವರು, ಅನೇರಿಕದ ನೋಟಗಳ ಮತ್ತು ಅಮೇರಿಕನರ ನಡೆ ನುಡಿಗಳ ವರ್ಣನೆ ಹೆಚ್ಚಾಗಿರಬಹುದಾಗಿತ್ತು ಎಂದಿದ್ದರು, ಅದೇ ಸ್ಫೂರ್ತಿ, ಅನೇರಿಕದೆ ಜನ ಜೀವನದೆ ಬಗ್ಗೆ ನನ್ನಿಂದ ಹೆಚ್ಚು ಬರೆಯಿಸಿತು. " ಹೆಚ್ಚು? ತುಂಬಾ ಹೆಚ್ಚಾಗಿದ್ದರೆ, ಹಿರಿಯರ ಆಶೀರ್ವಾದ ಬಲದಿಂದ ಬರೆದಿದ್ದೇನೆಂದು ಅವರ ಆಶ್ರಯ ಪಡೆಯುತ್ತೇನೆ. ಕಸಡಿನೆಯಾಗಿದ್ದರೆ ಕ್ರಮಿಸಿ.

ಮೊದಿ; ನೂರು ಪುಟಿಗಳನ್ನು ಬರೆಯುವಾಗ ಚಿ|| ಶಲ, ನನ್ನ ಸಹಾಯಕ್ಕೆ ಬ::-ದಿದ್ದರೆ, ಪುಸ್ತಕನೇ ಹೊರ ಬರುತ್ತಿರಲಿಲ್ಲ. ಹಾಗೆಯೇ ಕೊನೆಯ ನೂರು ಪುಟಿದ ಬಗ್ಗೆ ಗೆಳೆಯ ಶ್ರೀ ನಮಿರಾಜರನ್ನು ಜ್ಞಾ ಪಿಸಿ ಕೊಳ್ಳಲೇ ಬೇಕು

ನನೆಂಬರ್‌ ೧೪ ಇತಿ ನಿಮ್ಮನ ಮದರಾಸು ನಾಡಿಗೆ ಕೃಷ್ಣಮೂರ್ತಿ

ವಿಷಯ ಸೂಚಿಕೆ

ಕನಸು-ನನಸು

ಹಡಗಿನ ದಿನಚರಿ

ಬಂಗಾರದ ಭೂಮಿ

ನ್ಯೂಯಾರ್ಕಿನಲ್ಲ

ಅಂತರ ರಾಷ್ಟ್ರೀಯ ವಿದ್ಯಾರ್ಥಿ ಮಂದಿರಗಳು

ಗಾಂಧೀಜಿ ಬಗ್ಗೆ ಅಮೇರಿಕನ್ನರ ಆಸಕ್ತ ಅಮೇರಿಕದಲ್ಲಿ ಜೀವನ ಸೌಕರ್ಯಗಳು ಅಮೇರಿಕದ ವಿಶ್ವನ ವಿದ್ಯಾನಿಲಯಗಳು ವಿಶ್ವ ವಿದ್ಯಾನಿಲಯ ನಗರ

ಆಮೆ (ರಿಕದ ವಿಶ್ವವಿದ್ಯಾನಿಲಯ ಸಂಘಗಳು ಓಜಾಕರ್ಕ್ಸ ಉದ್ಯಾನನ ವನದಲ್ಲಿ ಅಮೇರಿಕದಲ್ಲಿ ಪತ್ರಿಕೋದ್ಯಮ ಅಮೇರಿಕದ ಸ್ತ್ರೀ ಪತ್ರಿಕೋದ್ಯಮಿಗಳು ಪತ್ರಿಕೋದ್ಯಮ ಶಾಲೆ ಪತ್ರಿಕೋದ್ಯೋಗಿಯ ಪ್ರ ಪ್ರತಿಚ್ಞೆ ಕಾಲೆಜಿನ ಕೊನೆಯ ದಿನಗಳು

ಮರಳಿ ಭಾರತಕ್ಕೆ

೭೪ ಲಳ ೯೩ ೧೦೦ ೧೦೩ ೧೦೯

ಪುಸ್ತಕವನ್ನು ಗೌರವ ಪೂರ್ವಕವಾಗಿ ಕನ್ನಡಿಗರಿಗೆ ಅರ್ಸಿಸಿದ್ದೇನೆ.

ನಾ ಕೃಮೂ,

ಸಾಗರದಾಚೆ

ಕನಸು-ನನಸು

ಸಾಗರಾದಾಜೆ ಹೋಗಬೇಕೆಂಬ ಕನಸು ನನಗೆ ಮೂಡಿದ್ದು ನಾ ಲೋಯರ್‌ ಸೆಕಂಡರಿ ಪರೀಕ್ಷೆಗೆ ಓದುತ್ತಿ ದಾಗ. ಆಗಲೇ ಪುಸ್ತಕ ಭಂಡಾರ ದಿಂದ ಪುಸ್ತಕಗಳನ್ನು ತಂದು ಓದುವ ಅಭ್ಯಾಸ ನನಗೆ ಬಂದಿತ್ತು. ಒಂದು ದಿನ, ಶ್ರೀ! ರಾ.ವೆ. ಕರಗುದರಿಯವರು ಬರೆದ * ಡಾ| ನಾರಾಯಣ ಸುಬ್ರಾಯ ಹರಡೀಕರ”? ಎಂಬ ಪುಸ್ತಕವನ್ನು ಓದಿದೆ. ತಾಯ್ನಾಡಿನ ಸೇವೆ ಮಾಡಲು ಡಾ|| ಹರಡೀಕರರು ಪಣತೊಟ್ಟು ಯಾವರೀತಿ ಬಹಳ ಕಷ್ಟ ಪಟ್ಟು ಅಮೇರಿಕಕ್ಕೆ ಹೋಗಿ ಉಚ್ಚಶಿಕ್ಷಣನನ್ನು ಪಡೆದು, ಭಾರತದ ಸೇವೆ ಕೈಕೊಂಡರೆಂಬ ಅಂಶವನ್ನು ಓದ್ದಿದಾಗಿನಿಂದ ನಾನೂ ಅವರಂತಾಗಬೇಕ್ಕು ಅವರ ಹಾಗೆ. ಸೇವೆಗೈಯಬೇಕು ಎಂಬ ಪ್ರಬಲವಾದ ಆತೆ ತಲೆದೋರಿತು. ಆಗ ನಾನಿನ್ನೂ ಚಿಕ್ಸವನಿದ್ದುವರಿಂದ ಅದು ನನ್ನ ಮನಸ್ಸಿನಲ್ಲಿ ಹಾಗೆಯೇ ಬೀಡು ಬಿಟ್ಟು ಕೊಂಡಿತ್ತು.

ಕೆಲವು ವರ್ಷಗಳನಂತರ ಶ್ರೀಃ ವಿ. ಕೃ. ಗೋಕಾಕರು ಬರೆದ « ಸಮುದ್ರದಾಚೆಯಿಂದ ಎಂಬ ಪುಸ್ತಕವನ್ನು ಓದಿದ ಮೇಲಂತೂ " ಸೀಮೆ?'ಗೆ ಹೋಗಿಯೇ ತೀರಬೇಕೆಂಬ ಆಕಾಂಕ್ಷೆ ತೀವ್ರಗತಿಯಲ್ಲಿ ಬೆಳೆಯ ತೊಡಗಿತು. ಆಗ ನಾನು ಶಿವಮೊಗ್ಗೆಯಲ್ಲಿ ಹೈಸ್ಟ್ರೂಲಿನಲ್ಲಿದ್ದೆನೆಂದು ಕಾಣು ತ್ತದೆ. ಆಗ ತಾನೇ ಪರದೇಶಕ್ಕೆ ಹೋಗಿ ಬಂದು ನಮಗೆ ಉಪಾಧ್ಯಾಯ ರಾಗಿದ್ದ ಡಾ| ನಾರಾಯಣರಾವ ನಿಕ್ಕಂ, ಎಂಬುವರು ಆಗಾಗ್ಗೆ ತರಗತಿ ಯಲ್ಲಿ ತಮ್ಮ ಪರದೇಶದ ಅನುಭವಗಳನ್ನು ತಿಳಿಸುತ್ತಿದ್ದರು. ಹಾಗೆಯೇ ನಮ್ಮ ಮುಖ್ಯೋಪಾಧ್ಯಾಯರಾಗಿದ್ದ ಡಾ| ಟ. ಎಂ. ಜೇಕಬ್‌, ಎಂಬು ವರು ಸೀಮೆಯ ತಮ್ಮ ಅನುಭವಗಳನ್ನು ಮನರಂಜಕವಾಗಿ ತರಗತಿಯಲ್ಲಿ ವರ್ಣಿಸುತ್ತಿದ್ದರು. ಮಾತುಗಳು ನನ್ನ ಮನದಲ್ಲಿ ಬೀಡುಮಾಡಿ ಕೊಂಡಿದ್ದ ಆಶೆಯನ್ನು ಪ್ರಜೋದಿಸುತ್ತಿದ್ದುವು.

ಸಾಗರದಾಚೆ

ನಾನು ಬೆಂಗಳೂರಿಗೆ ಇಂಟಿರ್‌ ಓದುವುದಕ್ಕೆ ಬಂದಾಗ ಸೀಮೆಗೆ ಹೋಗುವ ಕನಸುಗಳು ಬೀಳಕತ್ತಿದುವು. ನನ್ನ ಬಡತನವು, ಇನ್ನೂ ಮುಂದು ವರಿಯಬೇಕಾಗಿದ್ದ ನನ್ನ ಡಿಗ್ರಿ ವಿದ್ಯಾಭ್ಯಾಸ, ಮತ್ತು ನನ್ನ ಮನೆಯಲ್ಲಿನ ಅಡಚಣೆಗಳು, ನನ್ನ ಕನಸನ್ನು ಒಡೆದು ಬಿಡುತ್ತಿದುವು.

ಮೈಸೂರಿನಲ್ಲಿರುವ ಮಹಾರಾಜಾ ಕಾಲೇಜಿನಲ್ಲಿ ನಾನು ಬಿ. ಏ. ಡಿಗ್ರಿ ಪಡೆದುಕೊಂಡೆನು. ನಮಗೆ " ಭಾರತೀಯ ಅರ್ಥಶಾಸ್ತ್ರ? (Indian Econo 1105) ಕೈ ಡಾ|| ಆರ್‌. ಬಾಲಕೃಷ್ಣ ಎಂಬುವರು ಅಧ್ಯಾಪಕರಾಗಿದ್ದರು. ಅವರೂ ಸೀಮೆಯನ್ನು ಸುತ್ತಿ ಬಂದವರು. ನಮಗೆ ಬೇಜಾರಾದಾಗ “ಅರ್ಥ ಶಾಸ್ತ್ರ *ದ ಬದಲು “ಪ್ರಯಾಣಶಾಸ್ತ್ರ”ದ ಬಗ್ಗೆ ವ್ಯಾಖ್ಯಾನ ಮಾಡುತ್ತಿ ದ್ದರು. ಅನರ ಸೀಮೆಯ ಅನುಭವಗಳು ನನ್ಮುನ್ನು ಹುರಿದುಂಬಿಸುತ್ತಿದ್ದುವು. ಹಿಟ್ಲರನು ಮ್ಯೂನಿಚ್‌ ನಂದ ಬರ್ಲಿನ್‌ಗೆ ಹೋಗುವ ರೈಲಿನಲ್ಲಿ ಅವರೂ ಕುಳಿತು ಹೋಗುತ್ತಿದರೆಂಬ ವಿಷಯವನ್ನು ಹೇಳಿದಾಗ ನಮ್ಮ ಮ್ಫೆ ಜುಂ? ಎಂದು « ನಾವೂ ರೈಲಿನಲ್ಲಿದ್ದಿದ್ದರೆ > ಎಂಬ ಭಾವನೆಯುಂಟಾಗುತ್ತಿತ್ತು. ಭಾನನೆ ಸಾಧನೆಯಾಗುವ ಸಿದ್ಧಿ ಬರೀ ಕನಸಿನಂತಿತ್ತು. ಆಗ ಕನಸು ನನ ಸಾಗುವ ಬಗೆಯೇ ನನ್ನ ಬುದ್ಧಿಗೆ ತೋರುತ್ತಿರಲಿಲ್ಲ. ಆಗಿನ ನನ್ನ ಪರಿ ಸ್ಪಿತಿಗಳಲ್ಲಿ (ಸ್ಲಿತಿಯಲ್ಲಿ) ಅದು ಸಾಧ್ಯವೂ ಇರಲಿಲ್ಲ. ರಾತ್ರಿಯ ಊಟ ಎಲ್ಲಿಯಾಗುವುಜೋ ! ಎಂಬ ಶಂಕೆಯಲ್ಲಿದ್ದ ಕಾಲದಲ್ಲಿ, ಸೀಮೆಗೆ ಹೋಗುವ ಹುಚ್ಚು, ಕನಸಲ್ಲದೇ ಮತ್ತೇನು? | ೧೯೪೨ರ ಆಗಸ್ಟ್‌ ಸ್ವಾತಂತ್ರ್ಯ ಚಳುವಳಿ, ೧೯೪೩ರ ಅಲೆದಾಟ, ೧೯೪೩-೪೫ರ ಉಪಾಧ್ಯಾಯಗಿರಿ, ಇವುಗಳ ಮಧ್ಯೆ ಪರದೇಶಕ್ಕೆ ಹೋಗುವ ನನ್ನ ಕನಸು ಕನಸಾಗಿಯೇ ಉಳಿದು, ಆದರ ಬಗ್ಗೆ ವಿಚಾರವೇ ಇರಲಿಲ್ಲ.

೧೯೪೬ ರಲ್ಲಿ ನಾನು ನ್ಯಾಯಶಾಸ್ತ್ರಾಭ್ಯಾಸಕ್ಕೆಂದು ಕರ್ನಾಟಕದ

'ಗಂಡುನಾಡಾದ ಜೆಳಗಾವಿಗೆ ಹೋದೆನು. ಅಲ್ಲಿ ನನ್ನ ಕನಸು ಗೋಪುರ ಕಟ್ಟ ತೊಡಗಿತು. ಕನಸಿನ ಗೋಪುರ, ಗಾಳಿಯಗೋಪುರನೆಲ್ಲಿ ಆಗು ವುಹೋ ಎಂಬ ಭಯ ಆಗಾಗ್ಗೆ ಮೂಡುತ್ತಿದ್ದರೂ, ಕನಸು, ನನಸಾಗಿ,

ಖಿ

ಕನಸು.ನನಸು

ಕಾರ್ಯಕ್ರಮವನ್ನಾಗಿ ಮಾಡಿಕೊಳ್ಳುವ ಜಿಗಟಿನ ಮನಸ್ಸು? ಬೆಳೆ ಯುತ್ತಲಿತ್ತು. ನನ್ನ ಆಸೆ ರೂಪುಗೊಂಡದ್ದು ಬೆಳಗಾವಿಯಲ್ಲಿ. ಸರ್ದಾರ್‌ ವಲ್ಲಭಭಾಯಿ ಪಟೇಲರ ಜೀವನ ಚರಿತ್ರೆಯನ್ನು ಚಿಕ್ಕ ಹೊತ್ತಿಗೆಯ ರೂಪದಲ್ಲಿ ಆಗ ಪ್ರಕಟಸಿದ್ದೆ. ಪುಸ್ತಕದ ಬಗ್ಗೆ ಅನೇಕ ಜನ ನನ್ನ ಬೆನ್ನು

ತಟ್ಟಿದ್ದರು. ಭಾಷೆಯನ್ನೂ ಮೆಚ್ಚಿ ಹಿರಿಯರು ನನ್ನನ್ನು ಹರಸಿದ್ದರು.

ಸೀಮೆಗೆ ಹೋಗಬೇಕೆಂದು ಹೇಗೆ ಆಸೆ ಇತ್ತೋ ಹಾಗೆಯೇ ನಾನು ಪತ್ರಿ ಕೋದ್ಯಮಿಯಾಗಬೇಕೆಂಬ ಉತ್ಸ್ಪ ಬಾಸೆ ನನ್ನಲ್ಲಿತ್ತು. ನನ್ನ ಬಿ. ಎ. ಆದಂದಿನಿಂದ ಯಾವುದಾದರೂ ಒಂದು ಪತ್ರಿಕೆಯಲ್ಲಿ ಸೇರಿ ಕೆಲಸಮಾಡಬೇಕೆಂಬ ಅಭಿಲಾಷೆ ಇತ್ತು. ನನ್ನ ಇಷ್ಟ, ಎಷ್ಟು ಪ್ರಯತ್ನ ಮಾಡಿನರೂ ನೆರನೇರಲಿಲ್ಲ. «ಭಾರತದ ಸರ್ದಾರ್‌” ಎಂಬ ಪುಸ್ತಕ ಹೊರಬಿದ್ದಾಗ, ಒಬ್ಬ ಮಹನೀಯರು ಆದನ್ನು ಓದಿ, ನನ್ನನ್ನು ಕಕೆಸಿ, ಬೆನ್ನು ಚಸ್ಪರಿಸಿದರು. ನನು ಅಮೇರಿಕೆಗೆ ಹೋಗಲು ಹಣಸಹಾಯ ಮಾಡುವುದಾಗಿ ಹೇಳಿ, ಅಮೇರಿಕೆಯ ನಿಶ್ಚವಿದ್ಯಾನಿಲಯದಲ್ಲಿ ಓದಲು ಜಾಗ ದೊರಕಿಸಲು ಹೇಳಿ, ಅದು ಬಂದಾಗ, ನನಗೆ ಸಹಾಯ ಮಾಡಲು ಒಂತೆಗೆದರು. ಆಗ ನಾನು ಹೇಗಾದರೂ ಮಾಡಿ ಅಮೇರಿಕೆಗೆ ಹೋಗಿಯೇ ತೀರಬೇಕು, ಪತ್ರಿಕೋವ್ಯಮದಲ್ಲಿಯೇ ಶಿಕ್ಷಣ ಪಡೆಯಬೇಕೆಂದು ಹಟ ತೊಟ್ಟನು.

ನನ್ನ ಹುಚ್ಚು ಹೊಳೆಗೆ ಹರಿಗೋಲು ಹಾಕಿದನರು ನನ್ನ ಜೊತೆ ಯಲ್ಲೇ ವಾಸಿಸುತ್ತಿದ್ದ ಶ್ರೀ ರಾಘವೇಂದ್ರರಾಯರೆಂಬ ಇಂಜನಿಯರು, ಇನರು ನನ್ನ ಹಂಬಲಕ್ಕೆ ತನಿಯೆರೆದು, «ಪ್ರಯತ್ನ ಮಾಡಿರಿ, ಸಾಧ್ಯವಾದೀತು' ಎಂದು ಬೆಂಬಲ ಕೊಡುತ್ತಿದ್ದರು. ನನ್ನ ಬಡತನ ಅವರಿಗೆ ಗೊತ್ತಿದ್ದರೂ, ನನ್ನ ಬೆಳಗಾನಿಯ ಚಟುನಟಿಕೆಗಳನ್ನು ನೋಡಿ, ನನ್ನ ಸಾಹಸದಲ್ಲಿ ಥೈರ ನಂಬಿಕೆಗಳನ್ನು ತಂದೊಡ್ಡಿದರು. ನನಗಿಂತ ಹಿರಿಯರಾದ ಅನರ ಸನಿಸ್ನೇಹೆ ನನಗಿರದಿದ್ದರೆ ನನ್ನ ಆಸೆ ಗಾಳಿಯ ಗೋಪುರವೇ ಆಗುತ್ತಿತ್ತು. ಕರುಣೆಯ ಕ್ಸ ನೀಡಿದ ಜೀವ ನನ್ನ ಸ್ನೇಹನಿಧಿಯ ಪೈಕಿ ಒಬ್ಬರು.

೩,

ಸಾಗರದಾಜಿ

ಸೀನೆಗೆ ಹೋಗುವ ಕನಸನ್ನು ಕಂಡೆನು. ಆದರೆ ಕನಸನ್ನು ವನ ಸನ್ನು ಮಾಡುವ ರೀತಿ ಬಗೆಹರಿಯಲಿಲ್ಲ. ಮನಸ್ಸು ಚಿಂತೆಯ ಹುತ್ತವಾ ಯಿತು. ಯಾವಾಗಲೂ ಅದೇ ಯೋಚನೆಯಾಯಿತು. ಅಮೇರಿಕೆಗೆ ಹೊ ಗುವ ಬಗೆ ಎಂತು? ನನ್ನ ಸಾಹಸಕ್ಕೆ ಹಣವನ್ನುಎಲ್ಲಿಂದ ತರುವುದು? ಒಟ್ಟಿಗೆ ೫೦ ರೂಪಾಯಿ ಇಲ್ಲದ ನಾನು ಐದು ಸಹಸ್ರ ರೂಪಾಯಿ ಹೇಗೆ ಕೂಡಿ ಹಾಕುವುದು? ಸಾಹಸ್ತ ಬಗೆಹರಿಯದ್ದಾಗಿ ಕಂಡು ಬಂದರೂ, ಹೇಗಾದರೂ ಮಾಡಬೇಕೆಂಬ ಧೃಡಸಂಕಲ್ಪನನ್ನು ಮಾಡಿದೆವು.

೧೯೪೬ನೇ ಇಸಿ ಫೆಬ್ರುವರಿ ತಿಂಗಳಲ್ಲಿ ನನ್ನ ಜೀವನದ ಅತಿಮಹ ತ್ವದ ನಿರ್ಣಯವನ್ನು ಕೈಕೊಂಡೆನು. ಮಾರ್ಚಿಯಲ್ಲಿ ಮೊದಲನೆಯ ಎಲ್‌, ಎಲ್‌. ಬಿ. ಪರೀಕ್ಷೆಯಿತ್ತು. ಪರೀಕ್ಷೆಗೆ ಹೋಗಿ ಪಾಸುಮಾಡಿ ವಕೀಲ ನಾಗಿ ಜೀವನ. ಸಾಗಿಸಬೇಕೇ, ಅಥವಾ ಅಮೇರಿಕೆಗೆ ಹೋಗುವ ಸಾಹಸ ಕೈಕೊಂಡು ನನ್ನ ಗುರಿಯಲ್ಲ ಜಯಶಾಲಿಯಾಗಬೇಕೇ, ಎಂಬ ವಿಷಯ ದಲ್ಲಿ ಮನಸ್ಸಿನ ಹೊಯ್ದಾಟ ಪ್ರಾರಂಭವಾಗಿ, ಕೊನೆಗೆ ಅಮೇರಿಕೆಯ ಸಾಹ ಸವನ್ನೇ ಕೈಗೊಳ್ಳ ಬೇಕೆಂದು ತೀರ್ಮಾನಿಸಿದೆನು. ನನ್ನ ತೀರ್ಮಾನ ದಲ್ಲಿ ಅನೇಕ ತೊಂದರೆಗಳಿದ್ದುವು. ಜಯದ ಒಂದು ಎಳಯಾದರೂ ಆಗ ಕಣ್ಣಿಗೆ ಕಂಡಿರಲಿಲ್ಲ. ನನ್ನಲ್ಲಿದ್ದ ಹಟ ಮತ್ತು ಮುನ್ನುಗ್ಗುವ ದೈರ್ಯ, ಇನೆ ರಡೇ ನನ್ನ ಆಯುಧಗಳಂಗಿದ್ದುವು. ಒಂದು ವೇಳೆ ನಾನು ಯಶಸ್ವಿಯಾಗ ದಿದ್ದರ, ಆಗುವ ಕಷ್ಟನಷ್ಟಗಳಿಗೆಲ್ಲಾ ತಯಾರಾಗಿದ್ದೆನು. ಹೆಚ್ಚಿಂದರೆ ನನ್ನ ಮುಂದಿನ ಭವಿತನ್ಯ ಜೀವನವೇ ಬೇರೆ ರೀತಿಯಲ್ಲಾಗುತ್ತಿತ್ತು. ಮೋಡಗಳ ಮಧ್ಯೆ ಬರುತ ಸೂರ್ಯ ತಲೆದೋರಿದಂತೆ, ನನ್ನ ನಿರಾಶೆಗಳ ತಂಡಗಳಲ್ಲಿ ಆಶಾಕಿರಣವನ್ನು ನನ್ನ ಸ್ನೇಹಿತರು ತೋರಿಸುತ್ತಿದ್ದರು. ಆಗ ಅನರೇ ನನ್ನ ಬೆಳಕಾಗಿದ್ದರು.

ನನ್ನ ಅಮೇರಿಕೆಯ ಯೋಜನೆಯನ್ನು ಸಿದ್ಧಗೊಳಿಸುವ ಸಲುವಾಗಿ ಏನು ಮಾಡಬೇಕೆಂಬ ಬಗ್ಗೆ ಸಲಹೆಗಳನ್ನು ಪಡೆಯಲು ಬೊಂಬಾಯಿಯಲ್ಲಿದ್ದ ನನ್ನ ಸ್ನೇಹಿತರಾದ ಶ್ರೀ॥ ಸಂಜಿ:ವರಾಯರಲ್ಲಿ ಹೋದೆನು. ಸಂಜೀವ

ರಾಯರು ಆಗ "ನ್ಯೂ ಇಂಡಿಯಾ ಇನ್ಯೂರೆನ್ಸ್‌ ಕಂಪೆನಿ'ಯಲ್ಲಿ ಕೆಲಸದಲ್ಲಿ ದರು, ಕಾಂಡಿವಿಲಿಯಲ್ಲಿ ವಾಸ. ಅವರ ಮನೆ ನಮ್ಮಂತಹ ನಿರಾಶ್ರಿ ತರಿಗೆಲ್ಲ ಬಿಡಾರವಾಗಿತ್ತು. ಸಂಜೀವರಾಯರಲ್ಲಿ ನನ್ನ ಯೋಜನೆಯನ್ನು ಮುಂದಿಟ್ಟೆ ನು. ನನ್ನ ಕರ್ತೃತ್ವ ಶಕ್ತಿಯಲ್ಲಿ ಅವರಿಗೆ ನಂಬುಗೆ ಇದ್ದಿತಾದರೂ, ಸಾಹಸ ಕೈಗೊಳ್ಳಲು ನನಗೆ ಸಾಧ್ಯವಾಗದೆಂದು ಹೇಳಿದರು. ಹುಟು ಯೋ ಚನೆಯನ್ನು ಬಿಟ್ಟು ಎಲ್ಲಿಯಾದರೂ ಬೊಂಬಾಯಿನಲ್ಲಿ ಕೆಲಸ ಸಕ್ಸ ಸೇರು ವುದೇ ಒಳ್ಳೆಯದೆಂದು ಅನರು ಅಭಿಪ್ರಾಯ ಪಟ್ಟಿ ರು. ಏನೇ 01 ನಾನು ಅಮೇರಿಕೆಗೆ ಹೋಗಲು ತೀ ಬೂ ಗಿಯೂ, ಬಗ್ಗೆ ಏನಾದರೂ ಸಲಹೆ ಹಜಜ ಸು: ಮೌನವೇ ಅನರ ಉತ್ತರವಾಯಿತು. ಕೊನೆಗೆ ನನಗೆ ನಾನೇ ಏನಾದರೂ ಉಪಾಯ ಕಂಡು ಹಿಡಿದುಕೊಳ್ಳ ಚು ತೀರ್ಮಾನಿಸಿದನು. ಮೊದಲು ಬೊಂಬಾಯಿ ವಿಶ್ವ ವಿದ್ಯಾ ನಿಲಯದ ಕಚೇರಿಗೆ ಹೋಗಿ ಪರದೇಶದ ವಿಶ್ವವಿದ್ಯಾನಿಲಯಗಳ ಜೂ ಮಾಡಿಕೊಂಡು ಬರಬೇಕೆಂದು ಮರು ದಿನ ಅಲ್ಲಿಗೆ ಹೊರಟಿನು. ನಾನು ವಿಶ್ವವಿದ್ಯಾ ನಿಲಯವ ಕಚೇರಿಗೆ ಹೋದಾಗ, ಇನೊ ಬ್ಬ ಗುಜರಾತಿ ವಿದ್ಯಾರ್ಥಿ ಇದೇ ವಿಷಯದ ಬಗ್ಗೆ ಮಾಹಿತಿ ದೊರಕಿಸಿಕೊಳ್ಳುವ ಸಲ್ಪು ವಾಗಿ ಬಂದಿದ್ದನು. ಆತನಲ್ಲಿ ನನ್ನ 'ಮನೋಗತನನ್ನು ಹೇಳಿಕೊಂಡಿನು. ಆತ ನನಗೆ ಬೊಂಬಾಯಿಯಲ್ಲಿ, ಪರದೇಶಕ್ಕೆ ವಿದ್ಯಾಭ್ಯಾಸಕ್ಕಾಗಿ ಹೋಗುವ ಹಣಸಹಾಯ ದೊರಕಿಸಿ ನಿದ್ಯಾರ್ಥಿನಿಧಿ ಸಂಸ್ಥೆ ಗಳ ಪಟ ಸ, ಯೊಂದನ್ನು ಕೊಟ್ಟ ನು. ಅದರಿಂದ ತತ್ಕಾಲಕ್ಕೆ ಆನಂದವಾ ಯಿತು. ನನಗ” ಹಣ ಸಹಾಯ ಮೊರಕುತಿ ಶ್ತಿತ್ತೋ ಇಲ್ಲವೊ, ಆದರೆ ಪ್ರಯತ್ನ ಮಾಡಲು ದಾರಿಸಿಕ್ಟಿದ್ದು ಸಂತೋಷವಾಯಿತು.

ಮಾರನೆಯ ದಿವಸವೇ ಐದು ವಿದ್ಯಾರ್ಥಿನಿಧಿ ಸಂಸ್ಥೆಗಳಿಗೂ ಅರ್ಜಿ ಹಾಕಿದೆನು. ಪತಿ ತ್ರಿಕೋದ್ಯಮದ ಅಭ್ಯಾಸಕ್ಕೆ ನಾನು ಅಮೇರಿಕೆಗೆ ಹೋಗ ಲಿರುನೆನೆಂದೂ, ನನಗೆ ಹಣದ ಬೇಕೆಂದೂ ನನ್ನ ಅರ್ಜಿಯಲ್ಲಿ ನಮೂದಿಸಿದ್ದೆನು. ಬಿ. ಎ. ಡಿಗ್ರಿಯಲ್ಲಿ ತೇರ್ಗಡೆ ಹೊಂದಿದ್ದನು ಅಷ್ಟೆ. ವಿದ್ವೆ ಯಲ್ಲಿ ಅಸ್ಟೊಂದು ಪ್ರತಿಭೆಯನ್ನು ತೋರಿಸದಿದ್ದ ರೂ ಮಡ್ಡಿ ಯಂತೂ ಆಗಿರ

ಸಾಗರದಾಚಿ

ಲಿಲ್ಲ. ನಾಲ್ಕಾರು ದಿನಗಳಲ್ಲಿ ಐದು ಸಂಸ್ಥೆಗಳಿಂದಲೂ ಉತ್ತರ ಬಂತು. ಮೂವರು, ಪತ್ರಿಕೋದ್ಯಮದ ಅಭ್ಯಾಸಕ್ಕೆ ಹಣ ಸಹಾಯಮಾಡುವುದಿಲ್ಲ ವಾಗಿ ಬರೆದರು: ಇನ್ನಿಬ್ಯರು, ನಾನು ಅಷ್ಟೇನೂ ಪ್ರತಿಭಾವಂತನಲ್ಲನೆಂದೂ ನಾನು ಬಿ. ಎ. ಡಿಗ್ರಿಯಲ್ಲಿ ಮೂರನೆಯ ತರಗತಿಯಲ್ಲಿ ಉತ್ತೀರ್ಣನಾಗಿದ್ದು ದರಿಂದ ನನಗೆ ವಿದ್ಯಾರ್ಥಿವೇತನಗಳು ದೊರಕಲಾರವೆಂದೂ ಸ್ಪಷ್ಟವಾಗಿ ಬರೆದಿದ್ದರು. ಸಂಜೀವರಾಯಂರಿಗೆ ವಿಷಯ ಹೇಳಿದ ಮೇಲೆ ಅವರಿಗೆ ನನ್ನ ಹುಚ್ಚುತನದ ಬಗ್ಗೆ ಇನ್ನೂ ಫಿಖರವಾಯಿತು. ಖಂಡಿತವಾಗಿಯೂ ನಾನು ಯೋಚನೆಯನ್ನು ಬಿಟ್ಟು ಬಿಡಬೇಕೆಂದು ತಿಳಿಸಿದರು. ನನಗದು ಸಾಧ್ಯವೇ ಇರಲಿಲ್ಲ. ವಿದ್ಯಾರ್ಥಿವೇತನಸಂಸ್ಥೆಗಳಿಂದ- ಬಂದ ಉತ್ತರಗಳೂ ನನ್ನನ್ನು ಕೆಣಕಿಸಿದುವು. ಬೊಂಬಾಯಿಯಲ್ಲಿ ಪ್ರಯತ್ನಗಳು ಪ್ರಾರಂಭವಾಯಿತು. ಜಯ ಸಿಕ್ಕಲಿಲ್ಲ. ಒಂದು ತಿಂಗಳು ಬೊಂಬಾಯಿಯಲ್ಲಿ ಕಾಲ ಕಳೆದೆನು. ಯೋಜನೆಗಳ ಮೇಲೆ ಯೋಜನೆಗಳನ್ನು ಹಾಕುತ್ತಾ, ಕೊನೆಗೊಂದು ದಿನ ಸಂಜೀವರಾಯರಿಗೆ ಸಲಾಮು ಹೊಡೆದು, ಸಂಜೆ ನಡೆದುಬಿಟ್ಟೆ ಮೈಸೂ ರಿಗೆ,

ಮರಳಿ ಮೈಸೂರಿಗೆ ಬಂದಾಗ ಎಪ್ರಿಲ್‌ ತಿಂಗಳು. ದಾರಿಯಲ್ಲಿ ಬೀರೂರಿನಲ್ಲಿ ನಮ್ಮಣ್ಣ ಸಿಕ್ಕಿ ನನ್ನನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂ ಡರು. ನನ್ನ ಅಲೆದಾಟಕ್ಕೆ ಛೀಮಾರಿ ಹಾಕಿದರು. ನಾನು ಅದಾವುದನ್ನೂ Wh ಇಲ್ಲ ನನ್ನ ಧ್ಯೇಯಸಾಧನೆಯೇ ನನ್ನ ಮುಖ್ಯ ಗುರಿಯಾ ಗಿತ್ತು.

ಮೈಸೂರಲ್ಲಿ ಒಂದು ದಿನ ರಾತ್ರಿ ಒಂದು ಕನಸು ಕಂಡೆ. ಅದು ತಿರುಕನ ಕನಸಿನಂತಿತ್ತು. ಕನಸು ಹೀಗಿತ್ತು... ನನಗೀಗ ೫೦೦೦ ರೊಪಾಯಿ ಬೇಕು. ಹಣನಣ್ನು ನಾನು ಪುಸ್ತಕಗಳನ್ನು ಬರೆದು ಮಾರಿ ಸಂಪಾದಿಸಬೇಕು. ರಾಷ್ಟ್ರಪುರುಷರ ಹತ್ತು ಜೀವನಚರಿತ್ರೆ ಬರೆಯ ಬೇಕು. ಒಂದೊಂದು ಹೊತ್ತಿಗೆಗೆ ಎಂಟಾಣೆ ಬೆಲೆಯಿಡಬೇಕು. ಪ್ರತಿ ಯೊಂದು ಪುಸ್ತಕದ ೧೨೦೦ ಪ್ರತಿ ಹೊರಡಿಸಬೇಕು. ಇದರಿಂದ ನನಗೆ

ಕನಸು ನನಸು

ಒಟ್ಟು ೬೦೦೦ ರೂಪಾಯಿ ಬರುತ್ತಡೆ. ಒಂದು ಸಾವಿರ ರೂಪಾಯಿ ಖರ್ಚು ಹೋಗಲಾಗಿ ೫೦೦೦ ರೂಪಾಯಿ ಉಳಿಯುಕ್ತೆದೆ. ಪುಸ್ತಕಗಳನ್ನು ಹೀಗೆ ಮಾರಾಟ ಮಾಡಬೇಕು. ಮೈಸೂರು ಸಂಸ್ಥಾನದಲ್ಲಿ ೭೦ ತಾಲ್ಲೂಕುಗಳಿವೆ. ಪ್ರತಿಯೊಂದು ತಾಲ್ಲೂಕಿನಲ್ಲೂ ೧೫೦ ರೂಪಾಯಿನ ಪುಸ್ತಕಗಳನ್ನು ಮಾರ ಬೇಕು. ಅಂದರೆ ಹತ್ತು ಪುಸ್ತಕಗಳ ಒಂದು ಸೆಟ್ಟಿಗೆ ರೂಪಾಯಿ. ಕೇವಲ ಮೂವತ್ತು ಜನರನ್ನು ಚೇಟ ಮಾಡಿದರೆ ನನ್ನ ಕೆಲಸ ಮುಗಿಯು ವುದು, ರೀತಿ ಮೂರು ನಾಲ್ಕು ತಿಂಗಳಲ್ಲಿ ನನ್ನ ಆಸೆ ನೆರನೇರಿಸಿಕೊಳ್ಳ ಬಹುದೆಂದು, ಕನಸು ಕಂಡೆ.

ಕನಸು ಕಾರ್ಯಕ್ರಮವಾಗುವುದು ಬಹಳ ಕಷ್ಟವಿತ್ತು. ಮೊದ ಲಿಗೇ ಪುಸ್ತಕಗಳನ್ನು ಅಚ್ಚು ಹಾಕಿಸಲು ಕನಿಷ್ಠವೆಂದರೂ ೫೦೦ ರೂಪಾಯಿ ಗಳು ಬೇಕಾಗಿದ್ದುವು. ಇಲ್ಲಿಯೂ ನನ್ನ ಸ್ನೇಹಿತರು ಅಭಯಹಸ್ತ ನೀಡಿದರು.

ನನ್ನ ತಿರುಕನ ಕನಸನ್ನು ನನ್ನ ಗೆಳೆಯರಾದ ಶ್ರೀ ಹಾ. ಶ್ರೀ. ದೊರೆ ಸ್ವಾಮಿಯನರಿಗೆ ತಿಳಿಸಿದೆ. ಸುಬ್ರಾಯನ ಕೆರೆಯ ಮೈ ದಾನದಲ್ಲಿ ನಮ್ಮ ಆಸ್ತಾಲೋಚನಸಭೆ ಸೇರಿತ್ತು. ಹೊರೆಯವರು ನನ್ನ ಯೋಜನೆ ಕೇಳಿ ನಕ್ಕರು. ಸಾಧ್ಯವಿಲ್ಲದ ಮಾತೆಂದರು. ಅನರು ಆಗ ಸಾಹಿತ್ಯಮಂದಿರದ ಒಡೆಯರಾಗಿದ್ದರು. ಪುಸ್ತಕಗಳನ್ನು ಪ್ರಕಟಣೆ ಮಾಡುವ ಕೆಲಸದಲ್ಲಿ ತೊಡ ಗಿದ್ದರು. ನನ್ನ ಒಂದು ಪುಸ್ತಕವನ್ನು ಅಚ್ಚುಹಾಕಿಸಿಕೊಡಿ, ಎಂದೆ. ಅದಕ್ಕೆ ತಗಲುವ ಖರ್ಚೆಲ್ಲವೂ ನನ್ನದೇ ಆದರೂ, ಅನರ ಪ್ರಕಟಣೆಯ ಹೆಸರು ಬೇಕಾಗಿತ್ತು. ಆಗಿನ ಕಾಲದಲ್ಲಿ ಯುದ್ದದ ಸಲುವಾಗಿ ಬಂದ ಕಾಗದದ ಹತೋಟಿ ಇನ್ನೂ ಹೋಗಿರಲಿಲ್ಲ. ನನ್ನ ಯೋಜನೆಗೆ ಅನರು ಬೆಂಬಲ ನೀಡದಿದ್ದರೂ, ನನ್ನ ಒಂದು ಪುಸ್ತಕ ಹಾಕಿಕೊಟ್ಟು ಪುಣ್ಯಕಟ್ಟಿ ಕೊಂಡರು.

ಅಂತೆಯೇ ನನ್ನ ಗೆಳೆಯರಾದ ಉಷಾ ಮುದ್ರಣಾಲಯದ ಶ್ರೀ ರಾಘ ನೇಂದ್ರ ಹಬ್ಬುಅವರೂ ಮತ್ತು ಸಂಪತ್ತುಮಾರ ಪ್ರೆಸ್‌ನ ಶ್ರೀ ಓಟ. ನಾರಾ ಯಣರವರೂ, ಶ್ರೀ ಎಂ. ವಿ. ಜಂಬುನಾರ್ಥರನರೂ ನನ್ನ ಉಳಿದ ಪುಸ್ತಕಗಳನ್ನು ಅಚ್ಚುಹಾಕಿಕೊಟ್ಟು ಉಪಕಾರಮಾಡಿದರು. ಅಂತೂ ಜುಲೈ

ಸಾಗರದಾಜಿ

ತಿಂಗಳ ವೇಳೆಗೆ ನನ್ನ ಹತ್ತು ಪುಸ್ತಕಗಳೂ ತಯಾರಾಗಿದ್ದುವು. ನನ್ನಯೋಜ ನೆಯ ಮೊದಲನೆಯ ಹಂತ ಮುಗಿದಂತಾಗಿತ್ತು. ಇನ್ನು ಅವುಗಳನ್ನು ಮಾರಾಟಮಾಟುವುದು. ಒಂದು ಸೊಟ್‌ಕೇಸಿನಲ್ಲಿ ಪುಸ್ತಕಗಳನ್ನು ಇಟ್ಟು ಕೊಂಡು ನನ್ನ ಕನಸಿನ ಕಾರ್ಯಕ್ರಮದಂತೆ ಊರಿಂದ ಊರಿಗೆ ತಿರುಗಾಡಲು ಪ್ರಾರಂಭಿಸಿದನು. ಮೊದಲು ಮೈಸೂರು ಜಿಲ್ಲೆಯಲ್ಲಿನ ಚಾಮರಾಜನಗರಕ್ಕೆ ಹೋದೆನು. ಅಲ್ಲಿ ನನ್ನ ಗೆಳೆಯರನೇಕರಿದ್ದರು. ಮನೆಮನೆ ತಿರುಗಿ ೩೦೦ ರೂಪಾಯಿಗಳ ಪುಸ್ತಕಗಳನ್ನು ಮಾರಿದೆನು. ನನಗಂತೂ ತುಂಬಾ ಸಂತೋಷ ವಾಯಿತು. ಚಾಮರಾಜನಗರದಲ್ಲಿ ಸಿಕ್ಕಿದ ಸ್ಫೂರ್ತಿ ನನ್ನನ್ನು ನಂಜನ ಗೂಡಿಗೆ ಕರೆತಂದಿತು. ಅಲ್ಲಿಯೂ ೨೦೦ ರೂಪಾಯಿ ಪುಸ್ತಕಗಳು ಮಾರಾ ಟವಾದುವು. ಹೀಗೆಯೇ ಓ. ನರಸೀಪುರ, ಕೃಷ್ಣರಾಜಸಾಗ 3, ಸಿರಿಯಾ ಪಟ್ಟ, ಶ್ರೀರಂಗಪಟ್ಟಿಗಳನ್ನು ಸುತ್ತಿ ಸುಮಾರು ಒಂದೊವರೆಸಾವಿರ ರೂಪಾ ಯಿಗಳನ್ನು ೨೦ ದಿನಗಳಲ್ಲಿ ಸಂಪಾದಿಸಿದೆನು. ನನ್ನ ಆನಂದಕ್ಕೆ ಪಾರವೇ ಇರಲಿಲ್ಲ. ನನ್ನ ಜೀವನದಲ್ಲಿ ಅಷ್ಟು ಹಣ ನಾ ಕಂಡೇ ಇರಲಿಲ್ಲ. ೨೦ ದಿನ ಗಳಪ್ರವಾಸ ನನ್ನ ದೇಹವನ್ನು ಜರ್ಥುರಿತವನ್ನಾಗಿ ಮಾಡಿತು. ತುಂಬಾ ಆಯಾಸಗೊಂಡಿದ್ದೆನು, ಮುಂದಿನ ಜಿಲ್ಲೆಗೆ ಹೋಗುವ ಉತ್ಸಾಹವಿದ್ದರೂ ತ್ರಾಣವಿದ್ದಂತೆ ಕಾಣಲಿಲ್ಲ. ಮಧ್ಯೆ ನನ್ನ ಚಿಕ್ಕ ಪುಸ್ತಕಗಳ ಬಗ್ಗೆ ವೃತ್ತ ಪತ್ರಿಕೆಗಳಲ್ಲಿ ಒಳ್ಳೆಯ ವಿಮರ್ಶೆಗಳೂ ಬಂದುವು. ಆಗ ದೇಶದಲ್ಲಿ ರಾಷ್ಟ್ರೀಯ ಮನೋಭಾವನೆ ಉಚ್ಛ್ರಾಾಯಸ್ಥಿತಿಯಲ್ಲತ್ತು. ಜನರು ರಾಸ್ಟ್ರಪುರುಷರ ಜೀವನ ಚರಿತ್ರೆಗಳನ್ನು ಓದಲು ಉತ್ಸುಕತೆ ತೋರಿಸುತ್ತಿದ್ದರು. ೨೦ ದಿನ ಗಳ ಅಲೆದಾಟದಲ್ಲಿ ಬಂದ ೧೫೦೦ ರೂಪಾಯಿನಲ್ಲಿ ಅಚ್ಚು ಹಾಕಿಸುವುದಕ್ಕೆ ಮತ್ತು ಕಾಗದಕ್ಕೆ ತಗಲಿದ ವೆಚ್ಚವನ್ನು ಕೊಟ್ಟು, ಉಳಿದ ಹಣವನ್ನು ನನ್ನ ಅಮೇರಿಕೆಯ ಪ್ರವಾಸದ ಮೊದಲ ನಿಧಿಯನ್ನಾಗಿ ಮಾಡಿಕೊಂಡು ಬೊಂಬಾ ಯಿನಲ್ಲಿರುವ ಮೈಸೂರು ಬ್ಯಾಂಕಿನಲ್ಲಿ ಶೇಖರಿಸಿಟ್ಟಿನು. ನನಗೆ ಮೈಯಲ್ಲಿ ಸ್ವಲ್ಪ ದೇಹಾಲಸ್ಯ ತಲೆಯೋರಿದ್ದರಿಂದೆ ನನ್ನ ಮುಂದಿನ ಜಿಲ್ಲೆಯ ಅಲೆದಾಟ ವನ್ನು ಸದ್ಯಕ್ಕೆ ನಿಲ್ಲಿಸಿದೆನು. ಸಮಯಕ್ಕೆ ಸರಿಯಾಗಿ ಬೆಂಗಳೂರಿನ ಸತ್ಯ ಶೋಧನ ಪುಸ್ತಕ ಭಂಡಾರದ ಶ್ರೀ ನಿಟ್ಟೂರು ಶ್ರೀನಿವಾಸರಾಯರು ನನ

ಕನಸು.ನನಸು

ಗೊಂದು ಕಾಗದವನ್ನು ಬರೆದು ತಮ ನ್ನು ನೋಡಬೇಕೆಂದು ಸೂಚಿಸಿದ್ದರು. ಬೆಂಗಳೂರಿಗೆ ಬಂದು 'ಅನರನ್ನು ಜಿ ನನ್ನ ಪುಸ್ತಕಗಳ ಬಗ್ಗೆ ಬಂದಿತು. ಉಳಿದ ಎಲ್ಲಾ ಪುಸ್ತಕಗಳನ್ನೂ ಅವರಿಗೆ ವಿಕ್ರಯಿಸಿ, ಅವರಿಂದ ೬೦೦ ರೂಪಾಯಿಗಳನ್ನು ಮುಂಗಡವಾಗಿ ತೋಡ. ಮುಂದಿನ ಆಲೋ ಚನೆಯನ್ನು ಮಾಡತೊಡಗಿದೆನು. ನನ್ನಲ್ಲಿ ಆಗ ಖರ್ಚುಕಳೆದು ೧೫೦೦ ರೂ ಜಾಗ ಇದ್ದುವು. ನನ್ನ ಆಗಿನ ಲೆಖ್ಬ ಪ್ರಕಾರ ಇನ್ನೂ ಖ೫೦೦ರೂ ಪಾಯಿಗಳು ಬೇಕಾಗಿದ್ದು ವು. ಏನೂ ಬಗೆಯದೆ ಪುನಃ ಬೊಂಬಾಯಿಗೆ ತೆರಳಿದೆನು.

ಸಂಜೀನರಾಯರಿಗೆ ನನ್ನ ೨೦ ದಿನದ ಸಂಪಾದನೆ ತಿಳಿಸಿದಾಗ ಅವರು ತುಂಬಾ ಹರ್ಷಪಟ್ಟಿರು. ಆಗ ನನ್ನ ಉದ್ಯದ ಕೆ, ಹಾರ್ದಿಕ ಬೆಂಬಲ ವಿತ್ತರು... ಮುಂದಿನ ಕಾರ್ಯಕ್ರಮದ ಗ್ಗೆ ಇಬ್ಬರೂ ಚರ್ಚಿಸಿದೆವು. ಬೊಂಬಾಯಿನಲ್ಲಿರುವ ಕನ್ನಡದ ಶ್ರೀಮಂತರನ್ನು ವಿದಾ ಭಿಕ್ಷೆ ಬೇಡಬೇಕೆಂ ತಲೂ, ಪುನಃ ವಿದ್ದಾ ರ್ಥ ನೀತನಕ್ಕಾಗಿ ಪ್ರ ಯತ್ನ ಸಡಬೇಕ'ಂತ ನವಾಯಿತು. ಚು ಎರಡು ಸಂಸ್ಥೆ ಗಳು ನನ್ನ ಅರ್ಜಿ ಯನ

ಸಂಸ್ಥೆಗಳ ಅಧ್ಯಕ್ಷರುಗಳನ್ನು ಕಂಡು, “ನೋಡಿ, ೨೦

ಲೆ

ನಗಳಲ್ಲಿ ೧೫೦೦ "ರೂಪಾಯಿ, ಪುಸ್ತಕ ಬರೆದು, ಅಚ್ಚು ಹಾಕಿಸಿ, ನಾನೇ ಮಾರಿ ಸಂಪಾದಿಸಿದ್ದೇನೆ. ಬಿ. ಎ. ಡಿಗ್ರಿ ಪರೀಕ್ಷೆಯಲ್ಲಿ ಮೂರನೆಯ ತರ

ಗತಿಯಲ್ಲಿ ಉತ್ತೀರ್ಣನಾದರೂ, ನನಗೆ ಓದುನ ಮತ್ತು ನನ್ನ ಫು ಸಾಧಿ ಸುನ ಛಲ ಇವೆ. ಧೃ ರ್ಯ ಇದೆ. ಈಗಲಾದರೂ ನಿಮ್ಮ ಸಂಸ್ಥೆಯಿಂದ ಸಹಾಯಮಾಡಿ? ಕೇಳಿಕೊಂಡೆನು. ಅವರು ನನ್ನ ಪಾ ್ರಾರ್ಥನೆಯನ್ನು ಪರಿಶೀಲಿಸುವುದಾಗಿ ಹೇಳಿದರು. ಶ್ರೀ ಅಮೈ ತೆಲಾಲ್‌ ಸೇ ನಿದ್ಯಾರ್ಥಿ ವೇತನ ಸಮಿತಿ” «ಶ್ರೀ ವಾಡಿಯಾ ನಿದ್ಯಾರ್ಥಿವೇತನ ಸಮಿತಿ? ಇನೇ ಎರಡು ಸಂಸ್ಥೆಗಳು.

ನಿದ್ಯಾರ್ಜನೆಗಾಗಿ ಭಿಕೆಬೇಡಬೇಕೆಂದು ತೀರ್ಮಾನಿಸಿದ್ದರಿಂದ ಮರುದಿನವೇ ನಾನು ಭಿಕ್ಸಾಪಾತ್ರೆಯನ್ನು ಹಿಡಿದು ಹೊರಟನು. ಮೊದಲು .

ಸಾಗರದಾಜೆ

ನಾ ಭೇಟಿಯಾದದ್ದು ಶ್ರೀ ಬಿ. ಎಂ. ಶ್ರೀನಿವಾಸಯ್ಯನನರನ್ನು. ಬೊಂಬಾ ಯಿಯಲ್ಲಿರುವ ಸುಪ್ರ ಸಿದ್ಧ ವ್ಯಾಪಾರಿಗಳು: be. ಸಾಬೂನಿನ ಕಾರ್ಹಾನೆ ಯೊ ದಕ್ಷ ಟ್ಟ ದ್ದಾರೆ. ಅವರು ತಕ್ಷಣವೇ ೨೦೦ ರೂಪಾಯಿ ಗಳನ್ನು ಕೊಟ್ಟಿರು. "ಅಲ್ಲಿಂದ ಅದಾಯತೆಂಗೆ Ps ಶ್ರೀ ಆರ್‌. ಜೆ. ದೇಶಪಾಂಡೆಯನರನ್ನು ಕಂಡೆ. ಅನರು ೧೦೦ ರೂಪಾ ಳನ್ನು ಅನುಗ್ರಹಿಸಿದರು. ಕೆಲವೊಂದು ಕಡೆ ಹೋದಾಗ, ನಿರಾಸೆಯೂ ಆಯಿತು. ಅಷ್ಟೊತ್ತಿಗಾಗಲೇ ಒಂದು ತಿಂಗಳು ಬೊಂಬಾಯಿಯಲ್ಲಿ ಕಳದಿದ್ದ. ಅಕ್ಟೊ (ಬರ್‌ ೨ನೇ ತಾರೀಖು ಶ್ರೀ ಅನ್ಬುತಲಾಲ್‌ ಸೇಟ್‌ರಿಂದ ಕಾಗದ

ಬಂದಿತು. ತಮ್ಮನ್ನು ಬರೆದಿದ್ದರು, ಅಂದು ಗಾಂಧೀಜಿಯ ಹುಟ್ಟಿದ ಹಬ್ಬ, ಶುಭ ಸೂಚನೆ ಎಂದುಕೊಂಡೆ. ಶ್ರೀ ಅಮೃ್ಭ ತಲಾಲ್‌ ಸೇರ್ಟಜಿಯವರು ತುಂಬಾ ಆದರನಿಂದ ನನ್ನನ್ನು ಬರಮಾಡಿ ಕೊಂಡು ನನ್ನ ಪುಸ್ತಕ ಸಾಹಸೆನನ್ನು ಮೆಚ್ಚಿ ದರು. ವಿದ್ಯಾರ್ಥಿವೇತನ ಸೆಂಸ್ಸೆಯನರು ನನಗೆ ೧೭೦೦ ರೂಪಾಯಿ (ಬೊಂಬಾಯಿಫಿಂದ ನ್ಯೂಯಾ ರ್ಕ್‌ಗಿ ಹೋಗುನವರೆಗಿನ ಎರಡನೆ ತರಗತಿಯ ಹಡಗಿನ ಚಾರ್ಜು) ಗಳನ್ನು ಕೊಡಲು ನಿರ್ಧರಿಸಿರುವುದಾಗಿ ತಿಳಿಸಿ ನನ್ನ ಕೈಲಿ ಅಷ್ಟು ರೂಪಾಯಿಗಳಿಗೆ ಚಿಕ್ಕು ಕೊಟ್ಟಿ ರು. ಕೃ ತಜ್ಞ ತೆಯಿಂದ ಆದನ್ನು ಸ್ವೀಕರಿಸಿ ಶ್ರೀ ಅಮ್ಛ ತಲಾಲ್‌ ರಿಗೆ ನಮಸ್ಕಾರ ಹಾಕ ಅಲ್ಲಿಂದ ಕಾಂಡಿವಿಲಿಗೆ ಮನೆಗೆ ಟು ಸಂಜೀವ ನಿಗೆ ಚಾತ್ರ ಸುದ್ದಿ ತಿಳಿಸಿದೆ... ಸಂಜೀವರಾಯರು ಆನಂದಭರಿತ ರಾದರು. ವಿದ್ಯಾರ್ಥಿವೇತನ ಬರಲು ಸಹಾಯ ಮಾಡಿದ ಇನ್ನೊಬ್ಬ ಮಹನೀಯರನ್ನು ನಾನು ಇಲ್ಲಿ ನೆನಪು ಮಾಡಿಕೊಳ್ಳಬೇಕು. ಅವರೇ ಬೆಳ ಗಾವಿಯ ಕಾಂಗ್ರೆಸ" ನಾಯಕರಾದ ಶ್ರೀ ಕೇಶವರಾವ್‌ ಗೋಖಲೆ ಯವರು. ನನ್ನ ಬೆ ಶ್ರಿ ಶ್ರೀ ಸೇಟ್‌ ರಿಗೆ ಶ್ರೀ ತಾಟು ಒಂದು ಕಾಗದ ಕೊಟ್ಟಿದ್ದರು. ಗರ ನನಗೆ ಸಹಾಯಮಾಡಿತು.

ಸಂತೋಷದ ಸುದ್ದಿಯನ್ನು ಬೊಂಬಾಯಿನ ಕಾಮರ್ಸ್‌ ಪತ್ರಿಕೆ ಸಂಪಾದಕರಾದ ಶ್ರೀ ಆರ. ವೆಂಕಟೇೀಶಮೂರ್ತಿಯನರಿಗೆ ತಿಳಿಸಿದೆ.

'ಸನಸು-ನನಸು

ಅನರು ವಾಡಿಯ ವಿದ್ಯಾರ್ಥಿ ವೇತನಕ್ಟೂ ಏಕೆ ಪ್ರಯಶ್ಚ ಮಾಡಬ ರದು ಎಂದರು. ಕೂಡಲೇ 4 ಬಾಂಬೆ ಕ್ರಾನಿಕಲ್‌ ? ಪತ್ರಿಕೆಯ ಉಪ ಸಂಪಾ ದೆಕರಾದ ಶ್ರೀ ಪ್ರಭು ಅವರನ್ನು ಕಂಡು ಬಗ್ಗೆ ಸಹಾಯ ಮಾಡಲು ಕೇಳಿ ಕೊಂಡೆ. ಅನರು ನನ್ನ ಸಾಹಸವನ್ನು ಮೆಚ್ಚಿ. ಬೊಂಬಾಯಿನಲ್ಲಿರುವ ತಾತಾ ಸ್ಫೂಲ್‌ ಆಫ" ಸೋಸಿಯಲ” ವರ್ಸ್‌ (Tata School of Sc cial Work)ನ ಸಂಚಾಲಕರಾದ ಶ್ರೀ ಜೆ. ಎಂ. ಕುನಾರಪ್ಪನನರಿಗೆ ಒಂದು ಕಾಗದ ಕೊಟ್ಟರು. ನಾಗಪಾದದಲ್ಲಿರುವ ಶ್ರೀ ಕುಮಾರಪ್ರನನರನ್ನು ನೋಡಿ ಅವರಿಂದ ವಾಡಿಯಾ ವಿದ್ಯಾರ್ಥಿ ವೇಶನದ ಅಧ್ಯ ಭರಾದ ಸೆರ್‌ ರುಸ್ತುಂ ಮೆಸಾನಿ(ಎಂ. ಆರ”. ಮಸಾಥಿಯನರ ತಂದೆ) ಯಸರನ್ನು ಶ್ರೀ ವೆಂಕಬೇಶ ಮೂರ್ತಿಗಳವರ ಸಹಾಯದಿಂದ ಭೇಟಮಾಡಿದೆ. ಸರ್‌. ರುಸ್ತುಂರು ತಕ್ಷ ಣವೆ ವರ್ಷದಲ್ಲಿ ಸಿಲ್ಬು ಉಳಿದ ೫೦೧ ರೂಪಾಯಿಗಳನ್ನು ನನಗೆ ಡೆಯ ಪಾಲಿಸಿದರು. ಅಲ್ಲಿಗೆ ನನ್ನ ಹತ್ತಿರ ೪೦೦೦ ರೂಪಾಯಿಗಳಾದುವು. ಉಳಿದ ಸಾವಿರ ರೂಪಾಯಿಗಳನ್ನು ಹೇಗಾದರೂ ಮಾಡಿ ಮೈಸೂರಿನಲ್ಲಿ ಮಾಡಿಕೊಳ್ಳ ಬಹುದೆಂದು ಧೆ 3ರ್ಯ ತೆಗೆದುಕೊಂಡು ಸಂಜೀನನಿಗೆ ಸಂತೋಷದ ಸಲಾನು ಹೊಡೆದು ಮೈಸೂರಿಗೆ ಗಾಡಿ ಬಿಟ್ಟಿ. ಇನ್ನೇನು ಅಮೇರಿಕೆಗೆ ಹೋದಂತೆಯೇ ಎಂದು ಭಾವಿಸಿಬಿಟ್ಟೆ. ಆಗ ಸ್ವರ್ಗಕ್ಕೆ ಇನ್ನು ಉಳಿದದ್ದು ಮೂರೇ ಮೆಟ್ಟಿಲು.

ನಾನು ಮೈಸೂರಿಗೆ ಬರುವ ವೇಳೆಗೆ ಅಮೇರಿಕೆಯ ಸಿರಾಕ್ಕ್ಯೂಸ್‌ ವಿಶ್ವ ವಿದ್ಯಾನಿಲಯದಲ್ಲಿ 4 ಪತ್ರಿಕೋದ್ಯಮ ' ಓದಲು ಕಾಲೇಜಿನಲ್ಲಿ ಅಪ್ಪಣೆ ದೊರ ಕಿತ್ತು. ಜೊತೆಗೆ ೩೦೦ ಡಾಲರಿನ ಒಂದು ವಿದ್ಯಾರ್ಥಿ ವೇತನವನ್ನೂ ಕೊಟ್ಟಿದ್ದರು. ನನ್ನ ಹಣದ ಕೊರತೆ ಎಲ್ಲವೂ ನೀಗಿತು ಎಂದುಕೊಂಡು ಮುಂದಿನ ಪ್ರಯತ್ನವಾದ ಪಾಸ್‌ ಪೋರ್ಟ್‌, ಅಮೇರಿಕನ್‌ ವೀಸಾ ಮತ್ತು ಹಡಗನ್ನು ಗೊತ್ತುಮಾಡುವುದು, ಇವುಗಳಲ್ಲಿ ಆಸಕ್ತನಾದೆನು. ಇದೇ ಸಂದರ್ಭದಲ್ಲಿ ಮೈಸೂರು ಪ್ರಿಂಟಿಂಗ್‌ ಫ್ರೆಸ್‌ನ ಶ್ರೀ ಜಿ. ಹೆಚ್‌. ರಾಮ ರಾಯರ ಸಹಾಯದಿಂದ ಮೈಸೂರು ಪದವೀಧರರ ಸಹಕಾರಸಂಘದಿಂದ

೫೦೦ ರೂಪಾಯಿ ಸಾಲವೂ ದೊರಕಿತು.

7

ಸಾಗರದಾಜೆ

ಬೊಂಬಾಯಿಯಲ್ಲಿರುವ ಅಮೇರಿಕನ್‌ ಎಕ್ಸ್‌ಪ್ರೆಸ್‌ ಕಂಪೆನಿಗೆ ಕಾಗದ ಬಸಿದು ಹಡಗಿನಲ್ಲಿ ಎರಡನೆಯ ತರಗತಿಯ ಜಾಗನನ್ನು ಅಮೇರಿಕೆಗೆ ಹೋಗಲು ವಿತಾಸಲಾಗಿಡಬೇಕೆಂದು ಕೇಳಿಕೊಂಡೆನು. ತಕ್ಷಣವೇ ಅಲ್ಲಿಂದ ಉತ್ತ ರಬಂತು. ಜನವರಿ ೨೬ನೇ ತಾರೀಖು ಹೊರಡುವ ಮೇರಿನ್‌ ್ಯಡರ್‌ ಎಂಬ ಹಡಗಿನಲ್ಲಿ ನನಗೊಂದು ಸ್ಪಳ ಕಾದಿರಿಸಿರುವುದಾಗಿಯೂ, ನಾನುನನ್ನ ರಹದಾರಿ, ಅಮೇರಿಕನ್‌ ವೀಸಾ, ಡಾಲರ್‌ ಎಕ್ಸ್‌ ಚೇಂಜ್‌ ಸತ್ರ, ವೈದ್ಯಕೀಯ ಸರ್ಟಿಫಿಕೇಟ್‌, ಮುಂತಾದುವನ್ನು ಕಳುಹಿಸಿಕೊಡಬೇಕಾಗಿಯೂ ಬರೆದರು.

ರಹದಾರಿ (ಪಾಸ್‌ ಪೋರ್ಟ್‌) ಬರಲು ಮೈಸೂರು ಸರ್ಕಾರದೆ ಮೂಲಕ ರೆಸಿಡೆನ್ಸಿಗೆ ಹೋಗಬೇಕಾಗಿತ್ತು. ಆಗಿನ್ನೂ ಬ್ರಿಟಿಷ್‌ ರೆಸಿಡೆಂಟಿರು ಇದ್ದರು. ಮೊದಲು ನನ್ನ ಜಿಲ್ಲೆಯ ಮುಖ್ಯಾಧಿಕಾರಿ ಸಳಿಂದೆ ಅರ್ಜಿಗೆ "ಅಸ್ತು? ಅನ್ನಿಸಿಕೊಳ್ಳ ಬೇಕಾಗಿತ್ತು. ನಾನು ೧೯೪೨ನೆಯ ರಾಜಕೀಯ ಚಳುವಳಿಯಲ್ಲಿ ಭಾಗವಹಿಸಿ ಶಿಕ್ಷೆ ಅನುಭವಿಸಿದ್ದೆರಿಂದೆ, ನನಗೆಲ್ಲಿ ಅಧಿಕಾರಿಗಳು ರಹದಾರಿಗೆ ಚಕ್ಕರ್‌ ಕೊಡುಸರೋ ಎಂಬ ಹೆದರಿಕೆ ಇತ್ತು. ಆದರೂ ಶಿವಮೊಗ್ಗೆಯ ಪತ್ರಿಕೋಡ್ಯೋಗಿ ಸಂಘದ ಅಧ್ಯಕ್ಷರಾದ 'ಶ್ರೀ ಜಿ. ಶ್ರೀನಿವಾಸ ಐಯ್ಯಂಗಾರ್ಯರು ಮತ್ತು ನಮ್ಮ ಅಣ್ಣನವರ ಮಾವಂದಿರಾದ ಶ್ರೀ ಎ: ಶ್ರೀನಿವಾಸರಾಯರ ಸಹಕಾರದಿಂದ, ಆಗಿನ ಜಿಲ್ಲಾಧಿಕಾರಿಗಳಾಗಿದ್ದ ಶ್ರೀ ರ್ವ. ಎಸ್‌. ಹಿರಿಯಣ್ಣ ಯ್ಯನನರು ನನ್ನ ಅರ್ಜಿಗೆ " ಅಸ್ತು” ಅಂದರು. ಅರ್ಜಿ ಮೈಸೂರು ಸರ್ಕಾರಕ್ಕೆ ಬಂದ ಕೆಲವು ದಿನಗಳಲ್ಲಿಯೇ ಯಾವ ತೊಂದರೆಯೂ ಇಲ್ಲದೆ ನನಗೆ ಅಮೇರಿಕೆಗೆ ಹೋಗಲು ರಹದಾರಿ ಸಿಕ್ಕಿತು.

ರಹದಾರಿ ಸಿಕ್ಕಿದ ಕೂಡಲೇ, ಸಿರಾಕ್ಯೂಸ್‌ ವಿಶ್ವವಿವ್ಯಾನಿಲಯದಿಂದ ಬಂದ ಅಪ್ಪಣೆ ಚೀಟಿಯೊಂದಿಗೆ ರಿಸರ್ದ್‌ ಬ್ಯಾಂಕಿಗೆ, ಡಾಲರ್‌ ಎಕ್ಸ್‌ ಚೇಂಜ್‌'ಗೆ ಅರ್ಜಿಹಾಕಿದೆನು. ಅದು ಸ್ವೀಕೃತವಾಗಿ, ನನಗೆ ಡಾಲರ್‌ ಎಕ್ಸ್‌ಚೇಂಜ್‌ ಕೂಡ ಏನೂ ತೊಂದರೆಯಿಲ್ಲದೆ ದೊರಕಿತು. ಇನ್ನು ನನಗೆ ಬೇಕಾದದ್ದು ಅಮೇರಿಕನ್‌ ವೀಸಾ ಒಂದೇ. ಅಲ್ಲೇ ಬಂತು ಪಿಕಲಾಟ. ವೀಸಾ ದೊರ ಕುವುದೇ ಒಂದು ದೊಡ್ಡ ರಾದ್ಧಾಂತವಾಯಿತು.

೧೨

ಶನಸುುನನಸು

ಅಮೇರಿಕನ್‌ ವೀಸಾ ದೊರಕಿಸಲು ಪುನಃ ಬೊಂಬಾಯಿಗೇ ಹೋಗ : ಬೇಕಾಯಿತು. ಅಲ್ಲಿ ಅಮೇರಿಕನ್‌ ಕಾನ್ಸಲ್‌ ರವರನ್ನು ಭೇಟಿಮಾಡಿ ನನ್ನ ಲ್ಲಿದ್ದ ಕಾಗದ ಪತ್ರಗಳನ್ನು ತೋರಿಸಿ, ಅಮೇರಿಕೆಗೆ ಹೋಗಿ ನೆಲಸಲು ಅಮೇರಿಕನ್‌ ಸರ್ಕಾರದ ರಹದಾರಿ ಬೇಕೆಂದೆನು ನನ್ನ ವಿದ್ಯಾಭ್ಯಾಸದ ಅವಧಿ ಹತ್ತು ತಿಂಗಳಿತ್ತು. ತಿಂಗಳಿಗೊಂದು ಸಾನಿರದಂತೆ ಹತ್ತು ಸಾವಿರ ರೂಪಾಯಿ ನನ್ನಲ್ಲಿರದ ಹೊರತು ನನಗೆ ರಹದಾರಿ ಸಿಕ್ಕಲಾರದೆಂದು ತಿಳಿಸಿ ದೆರು. ಅಮೇರಿಕೆಗೆ ಹೋಗಲು ಇಷ್ಟೇ ಹಣಬೇಕೆಂದು ನನಗೆ ತಿಳಿದಿರಲಿಲ್ಲ. ೫,೦೦೦ ರೂಪಾಯಿ ಇದ್ದರೆ ಸಾಕೆಂದು ತಿಳಿದಿದ್ದೆನು. ಹೆತ್ತು ಸಾವಿರ ರೂಪಾಯಿ ಎಂದ ಕೂಡಲೇ ನನ್ನ ಎದೆ " ಧಸಲ್‌? ಎಂದಿತು. ನನ್ನ ಶಕ್ತಿ, ಪ್ರಭಾವವನ್ನೆಲ್ಲಾ ನ್ಯಯಮಾಡಿ ೫,೦೦೦ ಸಾವಿರೌ ಮಾಡುನ ಹೊತ್ತಿಗೆ ನಾನು ಸಾಕು ಸಾಕಾಗಿ ಹೋಗಿದ್ದನು. ಕೇವಲ ಇನ್ನೆರಡು ತಿಂಗಳಲ್ಲಿ ಉಳಿದಿದ್ದ ಐದು ಸಾವಿರ ರೂಪಾಯಿಯನ್ನು ಹೇಗೆ ಮಾಡುವುದು? ಮನಸ್ಸು ಗೊಂದಲದಲ್ಲಿ ಬಿದ್ದಿತು. ಯಾನ ದಾರಿಯೂ ಹೆಣಳೆಯಲಿಲ್ಲ. ಅಮೇರಿ ಕೆಗೆ ಹೋಗುವ ಪ್ರಯತ್ನವನ್ನೇ ಬಿಟ್ಟು ಬಿಡಬೇಕೆಂದು ಕೂಡ ಆಲೋಚಿ ಸಿದನು... ಸಿರಾಶನಾಗಿ ಕಾಂಡಿನಿಲಿಗೆ ಬಂದು ಸಂಜೀವರಾಯರಲ್ಲಿ ನನ್ನ ತೊಂದರೆ ತೋಡಿಕೊಂಡೆನು. ಸಂಜೀವ ನನ್ನನ್ನು ಹುರುಪು ಗೊಳಿಸಿದ. ಧ್ರೈರ್ಯಗುಂದಬಾರದಬೆಂದು ತಿಳಿಸಿದ. ಇನ್ನೆರಡು ತಿಂಗಳಲ್ಲಿ ಹೇಗಾದರೂ ಐದು ಸಾನಿರ ಮಾಡಿಯೇ ತೀರಬೇಕೆಂದು ಒತ್ತಾಯ ಮಾಡಿದ. ಹೇಗೆ ಸಾಧ್ಯ? ಎಂಬುದು ತಿಳಿಯಲಿಲ್ಲ. ಒಂದೇ, ಎರಡೇ, ೫,೦೦೦ ರೂಪಾಯಿ ಮಾಡಿಯಾಯಿತು. ಪುನಃ ಇನ್ನೈದು ಸಾವಿರ ಹೇಗೆ ತರಲಿ? ಆಗದ ಕೆಲಸವೆಂದಿತು ಮನಸ್ಸು. ಮಾಡಿಯೇ ತೀರಬೇಕೆಂದು ಸಂಕಲ್ಪ. ಹೊಯ್ದಾಟದಲ್ಲಿ ಮೂರು ದಿನ ಕಳೆದು ಬಡವಾಗಿ ಬಿಟ್ಟೆ. ಇನ್ನು ಪ್ರಯತ್ನ ಸಾಕೆಂದು ತೀರ್ಮಾನಿಸಿ, ಅನರನರ ಹಣ, ಅನರವರಿಗೆ ತಿರುಗಿ ಕೊಟ್ಟು ಸುಮ್ಮನಿರಬೇಕಂದು ಯೋಚಿಸಿ, ಮುಖದಲ್ಲಿ ಕಾರ್ಯಕ್ರಮ ಕೈಗೊಳ್ಳಬೇಕೆಂದು ಅಂದುಕೊಂಡೆ.

ನನಗೆ ಸ್ಫೂರ್ತಿಕೊಡಬೇಕೆಂದೋ ಏನೋ, ಅರಸೀಕೆರೆಯ ಕಾಂಗ್ರೆಸ್‌ ನಾಯಕರಾದ ಶ್ರೀ. ಡಿ. ವಿ. ರಾಮಸ್ಕಾಮಿಯನರು ಒಂದು ಕಾಗದ ಬರೆದು

೧೩

ಸಾಗರದಾಜೆ

ತಾವು ಒಂದು ಸಹಸ್ರ ರೂಪಾಯಿ ಕೊಡುವುದಾಗಿಯೂ, ತಮ್ಮನ್ನು ಬಂದು ಕಾಣಬೇಕೆಂದೂ ಕೇಳಿಕೊಂಡ ಕಾಗದ ಬೊಂಬಾಯಿಗೆ ಬಂತು. ಮುರಿದ ರೆಕ್ಸೈ ಪುನಃ ಚಿಗುರಿದುವು. ಶ್ರೀ ರಾಮಸ್ವಾಮಿಯವರಿಗೆ ನಾನೇನೂ ಹಳಬ ನಾಗಿರಲಿಲ್ಲ. ಆಗಸ್ಟ್‌ ಚಳುವಳಿಯ ಕಾಲಕ್ಕೆ ಅವರೂ ನಾವೂ ಜೊತೆಯಲ್ಲಿ ಮೈಸೂರಿನ ಸೆರೆಮನೆಯಲ್ಲಿ ರಾಜರ ಅತಿಥಿಗಳಾಗಿದ್ದೆವು. ಈಗ ನ್ಯಾಷನಲ್‌ ಸ್ಟ್ಯಾಂಡರ್ಡ್‌ ಪತ್ರಿಕೆಯ ಸುದ್ದಿವಿಭಾಗದ ಸಂಪಾದಕರಾದ ಶ್ರೀ. ಹೆಚ್‌. | ವೈ. ಶಾರದಾಪ್ರಸಾದ*(ಆಗಿನ ವಿದ್ಯಾರ್ಥಿ ಮುಖಂಡರು)ಮತ್ತು ನನ್ನನ್ನು ಕಂಡರೆ ಅವರಿಗೆ ತುಂಬ ಅಭಿಮಾನವಿತ್ತು. ಅಭಿಮಾನ ನನಗೆ ಅವರು ಸಹಾಯಮಾಡುವಂತೌಯಿತು.

ಬೊಂಬಾಯಿನಿಂದ ಓಡಿದೆ ಅರಸೀಕೆರೆಗೆ. ಶ್ರೀ. ರಾಮಸ್ವಾಮಿ ಯವರು ಊರಿನಲ್ಲಿಯೇ ಇದ್ದರು. ನನ್ನನ್ನು ಬರಮಾಡಿಕೊಂಡು ನನ್ನ ಅಲೆ ದಾಟವನ್ನೆಲ್ಲಾ ಕೇಳಿದರು. ಒಳ್ಳೆಯ ಊಟಹಾಕಿಸಿದರು. ರಾತ್ರಿ ನಾಲ್ಕುದಿನದಿಂದ ಬಾರದ ನಿದ್ರೆ ಬಂದಿತು. ಮರುದಿನ ಬೆಳಿಗ್ಗೆ ೧೦೦೦ ರೂಪಾಯಿ ಕೈಯಲ್ಲಿ ಕೊಟ್ಟು ಆಶೀರ್ವದಿಸಿ ಕಳುಹಿಸಿಕೊಟ್ಟ ರು. ನನ್ನ ಭಾರ ೪೦೦೦ ಸಾವಿರ ರೂಪಾಯಿಗಳಿಗಿಳಿಯಿತು.

ಬೆಂಗಳೂರಿಗೆ ಬಂದೆ. ಇಲ್ಲಿ ಯಾರನ್ನೂ ಇನ್ನೂ ಕೇಳಿರಲಿಲ್ಲ. ಕೇಳುವ ಅನಶ್ಯಕತೆ ಇರಲಿಲ್ಲ ಈಗ ಕೇಳದೇ ವಿಧಿ ಇರಲಿಲ್ಲ. ಅಣ್ಣ ಕೃಷ್ಣ ಶರ್ಮುರನ್ನು ಮರೆಹೊಕ್ಕೆ. ಅವರು ನನ್ನ ಸಾಹಸವನ್ನು ನೋಡಿ ಮೆಚ್ಚಿ ತಾವು ತಮ್ಮ ಕೈಲಾದ ಸಹಾಯಮಾಡಿಸುತ್ತೇನೆಂದರು. ಆಗ ನವೆಂ ಬರ್‌ ತಿಂಗಳು. ಬೆಂಗಳೂರಿನಲ್ಲಿ ಸುಭಾಷ" ನಗರದಲ್ಲಿ ಮೈಸೂರು ಕಾಂಗ್ರೆ ಸ್ಸಿನ ಏಳನೆಯ ಅಧಿವೇಶನ, ಶ್ರೀ ಕೆ. ಚೆಂಗೆಲರಾಯರೆಡ್ಡಿಯನರ ಅಧ್ಯ ಕ್ಷತೆಯಲ್ಲಿ ನಡೆಯುವದಿತ್ತು. ಅದಕ್ಕಾಗಿ ಎಲ್ಲ ಶ್ರೀಮಂತರೂ, ಬಡವರೂ ಹಣ ಕೊಟ್ಟಿದ್ದರು. ಅದೇ ಸಮಯದಲ್ಲಿಯೇ ನನ್ನ ಕೈಂ ಕರ್ಯವೂ ಆಗಬೇಕಾಗಿತ್ತು. ಯಾರನ್ನು ಕೇಳಿದರೂ ಸದ್ಯದಲ್ಲಿ ಏನೂ ಆಗುವುದಿಲ್ಲವೆಂದು ಹೇಳುತ್ತಿ ದರು.

೧೪

ಕನಸು-ನನಸು

ಒಂದು ದಿನ ಬೆಳಿಗ್ಗೆ ಆಯಾಸದಿಂದ ದೊಡ್ಡಣ್ಣ ಮಾರ್ಕೆಟ್ಟನ ಚೌಕದಲ್ಲಿ ಹೋಗುತ್ತಿದ್ದೆನು, ಮುಂದೇನು ಮಾಡಬೇಕೆಂಬುದೇ ಹೊಳೆ ದಿರಲಿಲ್ಲ. ದೂರದಿಂದ ಯಾರೋ ಒಬ್ಬರು, ಕೃಷ್ಣಮೂರ್ತಿಗಳೇ, ಇಲ್ಲಿ ಬನ್ನಿ” ಎಂದು ಕರೆದರು. ನನಗಾಶ್ಚರ್ಯವಾಯಿತು 4 ನೀವೇನೋ ಅಮೇರಿಕಕ್ಕೆ ಪತ್ರಿಕೋದ್ಯಮ ಓದಲು ಹೋಗುವವರು ? ಎಂದು ಪ್ರಶ್ನಿಸಿ ದರು. ಹೌದು ಎಂದೆ. ಮರುದಿನ ಬೆಳಿಗ್ಗೆ ತನ್ಮು ಮನೆಗೆ ಬರಬೇ ಕೆಂದೂ, ತಾವು ಒಂದು ಸಹಾಯಮಾಡುವುದಾಗಿಯೂ ತಿಳಸಿದರು. `ನನಗೆ ತುಂಚಾ ಆನಂದವಾಯಿತು. ನಡುರಸ್ತೆಯಲ್ಲಿ ನಿಲ್ಲಿಸಿ ನನ್ನನ್ನು ಮಾತನಾಡಿಸಿದನರು,, ವೀರಕೇಸರಿ ಸಿಃತಾರಾಮಶಾಸ್ತ್ರಿಗಳು. ಮರುದಿನ ಬೆಳಿಗ್ಗೆ ಶಂಕರಪುರದ ಅನರ ಮನೆಗೆ ಹೋದೆನು. "ಶಾಸ್ತ್ರಿಗಳು ನನ್ನನ್ನು ಬರಮಾಡಿಕೊಂಡು `ನನ್ನ ಕಥೆಯನ್ನೆಲ್ಲಾ ಕೇಳಿ ದರು. ಶಾಸ್ತ್ರಿಗಳಿಗೆ ಆಗ ಕಣ್ಣು ಸ್ವಲ್ಪ ಮಂಜು ಮಂಜಾಗಿ ಕಾಣಿಸು ತ್ರಿತ್ತು. ತಕ್ಷಣ ನನಗೊಂದು. ಸಲಹೆ ಇತ್ತರು. “ನೀವು ಹೈದರಾಬಾ ದಿಗೆ ಹೋಗಿಬರುತ್ತೀರಾ? ಎಂದು ಕೇಳಿದರು. «ಹೂಂ' ಎಂದೆ. ಶಾಸ್ತ್ರಿಗಳು ಸ್ಪಷ್ಟವಾಗಿ ಹೇಳಿದರು. ನೋಡಿ, ನುನು ಹೈದರಾಬಾದಿನ ದಿವಾನರಾದ ಸರ್‌ ಮಿರ್ಜಾರವರಿಗೆ ಒಂದು ಕಾಗದ ಕೊಡುತ್ತೇನೆ. ನಿಮ್ಮ ಅದೃಷ್ಟವಿದ್ದರೆ ಅನರು ಸಹಾಯ ಮಾಡುವರು. ಇಲ್ಲದಿದ್ದರೆ, ಖಾಲಿ ವಾಪಸು ಬರಬೇಕಾಗುವುದು. ನಿಮಗೆ ೫೦ ರೂ. ಖರ್ಚು ಆಗು ವುದು... ೫೦ ರೂಗೆ ೩೦೦೦ ರೂ. ಸಿಕ್ಕರೂ ಸಿಗಬಹುದು, ನೀವು ಅನಕಾಶ ಉಪಯೋಗಿಸಿಕೊಳ್ಳುವ ಹಾಗಿದ್ದರೆ ಹೇಳಿ” ಎಂದರು. ಮರು "ಮಾತನಾಡದೆ, ಕಾಗದ ಕೊಡಿ ಎಂದೆ, ಶಾಸ್ತ್ರಿಗಳು ಮಗನನ್ನು ಕರೆಸಿ, ಸರ್‌ ಮಿರ್ಜಾರವರಿಗೆ ಕಾಗದ ಬರೆಸಿದರು.

-ಕಾಗದದೊಂದಿಗೆ ಆದಿನ ರಾತ್ರಿಯೇ ಭಾಗ್ಯನಗರಕ್ಕೆ. ಪ್ರಯಾಣ ಬೆಳೆಸಿದೆನು.ು " ಷಾಮಂಜಿಲ್‌ ? ನಲ್ಲಿದ್ದ ದಿವಾನರಾದ ಸರ್‌ ಮಿರ್ಜಾ ರವರನ್ನು ಚೇಟಮಾಡಿವೆನು.

ಹಾಗರದಾಜಿ

ಭಾಗ್ಯನಗರವು ನನಗೆ ಭಾಗ್ಯನಗರವಾಗಲಿಲ್ಲ. ಮುಂದಿನ ಆಲೋಚನೆ ಯನ್ನು ಮಾಡುವ ಸಲುವಾಗಿ ಅಲ್ಲಿಂದ ಪುನಃ ಬೆಂಗಳೂರಿಗೆ ಮರಳಿಜೆನು.

ಸುಭಾಷ್‌ನಗರದ ಕಾಂಗ್ರೆಸ್‌ ಅಧಿವೇಶನ ಮುಕ್ತಾಯವಾಯಿತು. ನವೆಂಬರ್‌ ತಿಂಗಳು ಸವೆಯುತ್ತಾ ಬಂದಿತು. ನನ್ನ ನಿಧಿಮಾತ್ರ ಇನ್ನೂ ಕೂಡಿರಲಿಲ್ಲ ಯಾರೋ ಅಂದರು, ಮದರಾಸಿನ ಇಂಡಿರ್ಯ ಎಕ್ಸಪ್ರೆಸ್‌ ಪತ್ರಿಕೆಯ ಮಾಲೀಕರಾದ ಶ್ರೀ ರಾಮನಾಥ ಗೋಯೆಂಕರನರನ್ನು ಕಾಣ ಬೇಕೆಂದು. ಹೊರಟಿ ಮದರಾಸಿಗೆ. ಮದರಾಸಿನಲ್ಲಿ ಶ್ರೀ ಕಾಂತೀಲಾಲ್‌ ಗಾಂಧಿ ಯವರ ಸ್ನೇಹಿತರಾದ ಶ್ರೀ ಮೋಹನಲಾಲ* ಮೆಹ್ವಾರವರಲ್ಲಿ ಉಳಿದು, ಅಡಿಯಾರ್‌'ನಲ್ಲಿರುನ ವಾರ್ಧಾಶಿಕ್ಷಣಕ್ರಮದ ಸಂಚಾಲಕರಾದ ತಿರುವಾಂ ಕೂರಿನ ಶ್ರೀ ಜಿ. ರಾಮಚೆಂದ್ರನ್‌ ರವರನ್ನು ಕಂಡು ನನ್ನ ವಿವರನನ್ನೆಛ ಹೇಳಿದೆನು. ಅವರು ತಕ್ಷಣವೇ ಶ್ರೀ ಗೋಯೆಂಕಾರವರಿಗೆ ಒಂದು ಪತ್ರ ಬರೆದು ಕೊಟ್ಟರು. ಪತ್ರ ತೆಗೆದುಕೊಂಡು ಶ್ರೀ ಗೋಯೆಂಕಾರವರನ್ನು ಬೇಬಮಾಡಿದೆ. ಭೇಟಿಯಕಾಲಕ್ಕೆ ಬೆಂಗಳೂರಿನ “ಡೆಕ್ಕನ್‌ ಹೆರಾಲಕ್ಕ? ಪತ್ರಿಕೆಯ ಸಂಪಾದಕರಾದ ಶ್ರೀ ಪೋತನ್‌ ಜೋಸಫಾ್‌ರೂ ಇದ್ದರು. ಶ್ರೀ ರಾಮಚಂದ್ರನ್‌ರು ಕೊಟ್ಟಿ ಕಾಗದವನ್ನು ಓದಿ, ತಮ್ಮ ಕೈಲಿ ಸಹಾಯ ಮಾಡುವುದು ಸಾಧ್ಯವಿಲ್ಲವೆಂದರು, ಭಾರತೀಯ ವಿದ್ಯಾರ್ಥಿಗಳು ಅಮೇರಿ ಕೆಯಲ್ಲಿ ಸತ್ರಿಕೋದ್ಯಮದ ವಿಷಯವಾಗಿ ಕಲಿಯುವುದೇನೂ ಇಲ್ಲವೆಂದು ಎರಡು ನಿಮಿಷದಲ್ಲಿ ನನ್ನನ್ನು ನಿರುತ್ಸಾಹನನ್ನಾಗಿ ಮಾಡಿ ಕಳುಹಿಸಿಬಿಟ್ಟರು. ನಿರಾಶನಾಗಿ ಬಂದು ಶ್ರೀರಾಮಚಂದ್ರನ" ರವರಿಗೆ ನಡೆದ ವಿಷಯ ತಿಳಿಸಿದೆ. ಶ್ರೀರಾಮಚಂದ್ರನ”ರು. ಖುದ್ದಾಗಿ ತಾನೇ ಶ್ರೀ ಗೋಯೆಂಕಾರವರನ್ನು ಕಂಡು ಮಾತನಾಡಿದರು. ಆಗಲೂ ಏನೂ ಸಾಧ್ಯವಾಗಲಿಲ್ಲ. ಅಲ್ಲಿಗೆ ಗೋಯೆಂಕಾ ಪ್ರಕರಣವನ್ನು ಮುಕ್ತಾಯ ಮಾಡಿದೆ.

ಮೈಸೂರಿನ ಸುಪ್ರಸಿದ್ಧ ಗ್ರಂಥಕರ್ತರಾದ ಶ್ರೀ ವೈ. ಜಿ. ಕೃಷ್ಣ ಮೂರ್ತಿಯವರು ಮದರಾಸಿನಲ್ಲಿದ್ದರು ಅವರ ಸಲಹೆಯ ಮೇಲೆ ಮದ

ರಾಸಿನ ಆಗಿನ ಮುಖ್ಯಮಂತ್ರಿ ಶ್ರೀ ಟಿ. ಪ್ರಕಾಶಂರನರನ್ನೂ ನೋಡಿದೆ.

೧೬

ಕನಸು.ನನಸು

ಅಲ್ಲಿಯೂ ಏನೂ ಅನುಕೂಲವಾಗಲಿಲ್ಲ. ಕಾರಣ್ಯ ನನ್ನ ಬಗ್ಗೆ ಅವ ರಿಗೆ ಸಾಕಷ್ಟು ತಿಳಿವಳಿಕೆ ಇಲ್ಲದೇ ಇದ್ದುದೇ... ಅವರಾದರೂ ಸುಮ್ಮನೆ ನನ್ನ ಬಗ್ಗೆ ಯಾನ ಮಾಹಿತಿಯೂ ಇಲ್ಲದೆ, ಹೇಗೆ ಸಹಾಯ ಮಾಡಿಯಾರು? ನಾನಾದರೂ, ಮೈಸೂರಿನಿಂದ ಯಾರ ಪರಿಚಯೆ ಪತ್ರಗಳನ್ನೂ ತೆಗೆದು ಕೊಂಡು ಹೋಗಿರಲಿಲ್ಲ. ಕನ್ನಡದ ಮಂತ್ರಿಗಳಾಗಿದ್ದ ಶ್ರೀ ಕೆ. ಆರ್‌. ಕಾರಂತರನ್ನು ಭೇಓಮಾಡಬೇಕೆಂದು ಕೆಲವರು ಸಲಹೆ ಮಾಡಿದರು. ಆದರೆ ನನಗವರ ಪರಿಚಯವಿಲ್ಲದ್ದರಿಂದ್ಕ ಅನರನ್ನು ಭೇಟಮಾಡಲಿಲ್ಲ.

ಮದರಾಸಿನ ಪ್ರಯತ್ನಗಳು ಸಫಲವಾಗಲಿಲ್ಲ. ಮರುದಿನ ಬೆಂಗಳೂ ರಿಗೆ ಮರಳಬೇಕೆಂದು ನಿರ್ಧರಿಸಿ ಸಂಜೆ ಶ್ರೀರಾಮಚಂದ್ರನ್‌ರವರಿಗೆ ಹೇಳಿ ಹೋಗಲು ಮದರಾಸಿನ ಅಡಿಯಾರಿಗೆ ಬಂದೆನು. ಶ್ರೀರಾನುಚಂದ್ರನ್‌ರು ಮನೆಯಲ್ಲಿರಲಿಲ್ಲ. ಹತ್ತಿ ರದಲ್ಲಿಯೇ ಇದ್ದ ಸಮುದ್ರದ ದಂಡೆಯನ್ನು ನೋಡಿ. ಕೊಂಡು ಬರೋಣವೆಂದು ಅಲ್ಲಿಗೆ ಹೋದೆನು. ಮನಸ್ಸಿನಲ್ಲಿ ಯೋಚನಾ ತರಂಗಗಳು ಏಳ ಹತ್ತಿದುವು. ಸಮುದ್ರದ ಪ್ರಶಾಂತವಾತಾವರಣದಲ್ಲಿ ಮನಸ್ಸು ಶಾಂತಿ ಸಾಗರವಾಯಿತು. ಹಾಗೆಯೇ ಮರಳಿನ ಮೇಲೆ ನಿದ್ದೆ ಹೋದೆನು. ಅರ್ಧ ಘಂಟೆಯ ಹೊತ್ತು ಮಲಗಿರಹುದು. ನಿದ್ರೆಯಿಂದ ಎದ್ದು ಕಣ್ಣು ಬಿಡುವನರೆಗೆ ಏನೋ ಒಂದು ಶಾಂತಿ ಸುಖ ದೊರೆತಿತ್ತು. ಅಲ್ಲಿ ಮತ್ತೊಂದು ಕನಸು ಕಂಡೆನು.

ಕನಸು ರೀತಿ ಇತ್ತು;

ನನಗೆ ಬೇಕಾಗಿರುವುದು ಕೇವಲ ನಾಲ್ಕು ಸಾವಿರ ರೂಪಾಯಿ. ಒಬ್ಬೊಬ್ಬರು ನಾಲ್ಕು ರೂಪಾಯಿ ಕೊಟ್ಟರೆ, ಒಂದು ಸಾವಿರ ಮಂದಿ ನನ್ನ ನಿಧಿ ಕೊಡಬಲ್ಲರು. ಸಾವಿರ ಜನಕ್ಕೆ ಒಂದು ಪ್ರಾರ್ಥನಾ ಪತ್ರ ಕಳುಹಿಸುವುದು. ಪ್ರಾರ್ಥನೆಗೆ ಗೊಟ್ಟರೆ ನನ್ನ ಕೆಲಸ ತೀರಿತ್ಕು

೧೭

ಸಾಗರದಾಚೆ

ಎಂದು ಬಗೆದು ಸಮುದ್ರದ ಸ್ಫೂರ್ತಿ ಪಡೆದು ಹೊರಟುಬಿಟ್ಟೆ ನು. ಸಂಜೆ ಶ್ರೀರಾಮಚಂದ್ರನ್ನರಿಗೆ ನಮಸ್ಕರಿಸಿ, ರಾತ್ರಿಯ ಕೈ ಲಿನಲ್ಲಿಯೇ ರಗೆ ತಕ್ಷಣವೇ” ಅಣ್ಣ ಚರಗ ವರದಿಯನ್ನ ರ್ಥಿಸಿ, ನನ್ನ ಹೊಸ ಕನಸನ್ನು ವಿನರಿಸಿದೆನು. ಅವರು " ಭಲೆ' ಎಂದರು. ಅಲ್ಲಿಯೇ ಕುಳಿತು ಪ್ರಾರ್ಥನಾ ಪತ್ರವೊಂದನ್ನು ಬರೆದೆನು. ಇಂಡಿರ್ಯ ಪ್ರೆಸ್‌ ಮಾಲೀಕರಾದ ಶ್ರೀ ವಿ. ಎಸ್‌. ನಾರಾಯಣರಾಯರು ಮತ್ತು ಶ್ರೀ ಸಿ. ರಾಜಗೋಪಾಲಾಚಾರಿಯವರು ನನ್ನ ಪ್ರಾರ್ಥನಾಪತ್ರವನ್ನು SN

ಉಚಿತವಾಗಿ ಮುದಿ ದ್ರಿಸಿಕೊಟ್ಟು ಚು ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿಗೆ ಹೋಗಿ ಕನ್ನಡದ ಒಂದು ಸಾವಿರದ ಇನ್ನೂರು ಮಂದಿಯ ವಿಳಾಸವನ್ನು ತಂದು ಅವರೆಲ್ಲರಿಗೂ ಒಂದೊಂದು ಪ್ರಾರ್ಥನಾ ಪತ್ರದೊಂದಿಗೆ, ತಮ್ಮ ಕೈಲಾದಷ್ಟು ಸಹಾಯ ಮಾಡಬೇಕೆಂದು ಮನವಿ ಮಾಡಿಕೊಂಡೆನು. ಹಣವನ್ನು ನೇರವಾಗಿ ಬೊಂಬಾಯಿನಲ್ಲಿರುವ ಮೈಸೂರು ಬ್ಯಾಂಕಿಗೆ ಕಟ್ಟಲು ಕೇಳಿಕೊಂಡಿದ್ದೆನು. ಕನಸಿಗಾಗಿ ಸುಮಾರು ೩೦೦ ರೂ ಖರ್ಚು ಮಾಡಿದ್ದೆನು. ೧೫ ದಿವಸಗಳ ನಂತರ ನಾ ಬೊಂಬಾಯಿಗೆ ಹೋಗಿ ಎಷ್ಟು ಹಣ ಕೂಡಿದೆ ಎಂದು ನೋಡಲಾಗಿ ಕೇವಲ ೨೦೦ ರೂಪಾಯಿ ಮಾತ್ರ ಕೂಡಿತ್ತು, ಸಾವಿರದ ಇನ್ನೂರು ಜನಕ್ಕೆ ಫೇವಲ ಜನ ಮಾತ್ರ ನನಗೆ ಹಣ ಕಳುಹಿಸಿ ಕೊಟ್ಟಿದ್ದರು. ಥಿನೇದನೆಯಿಂದ ಸ್ವಲ್ಪ ಹಣವೇ ಸೇರಿದ್ದರೂ ಒಂದು ದೃಷ್ಟಿಯಿಂದ ನನಗೆ ಅನುಕೂಲವೇ ಆಗಿತ್ತು. ಯಾರನ್ನು ಬರೀ ಪ್ರಾರ್ಥನಾ ಪತ್ರದಿಂದ ಹಣ ಕೊಡುವಂತೆ ಮಾಡಲು ಸಾಧ್ಯವಾಗಿರಲಿಲ್ಲವೊ ಅವರನ್ನು ಸ್ವತಃ ಹೋಗಿ ಕೇಳಿದ 'ಕೂಡಲೇ ಕೊಡುವಷ್ಟು ಪ್ರಭಾವ ಮಾಡಿಸಿತ್ತು, ನಿವೇದನೆ,

ತಾತ್ಕಾಲಿಕವಾಗಿ ಆದ ಸೋಲಿನಿಂದ ಮುಂದೇನು ಮಾಡಬೇಕೆಂದು ತಿಳಿ'ನುದೆ ಚಿಂತಾಕ್ರಾಂಶನಾಗಿದ್ದೆನು. ಒಂದು ದಿನ ಬೆಳಿಗ್ಗೆ ಅದು ನವೆಂ ಬರ್‌ ೨೩ನೇ ತಾರೀಖು ೧೯೪೯, ಎಂದು ಕಾಣುತ್ತದೆ ಮದರಾಸಿನಿಂದ

೧೮

ಕನಸು-ನನಸು

ಒಂದು ಪತ್ರ ಬಂದಿತು, ಶ್ರೀ ಜಿ. ರಾಮಚಂದ್ರನ್ನರು ಬರೆದಿದ್ದರು. ಜೊತೆಗೆ ಶ್ರೀ ಗೋಯೆಂಕಾರವರು ಕಳುಹಿಸಿದ ಒಂದು ಸಾವಿರ ರೂಪಾಯಿಯ ಚಿಕ್ಕು ಇತ್ತು. ನನ್ನ ಸಂತೋಷಕ್ಕೆ ಸಾರವೇ ಇರಲಿಲ್ಲ. ನಾನು ಮದ ರಾಸಿನಿಂದ ಬಂದ ಮೇಲೆ ಶ್ರೀ ಗೋಯೆಂಕಾರವರಿಗೆ ಕನಿಕರ ಬರುನಂತೆ ಇನ್ನೊಂದು ಕಾಗದ ಬರೆದಿದ್ದೆ. ದಿನವೇ ಶ್ರೀರಾಮಚಂದ್ರನ್ನರು ಅವ ರನ್ನು ಭೇಟಿಯಾಗಿದ್ದರು. ಆಗ ಶ್ರೀ ಗೋಯೆಂಕಾರವರು ಚೆಕ್ಕು ಕೊಟ್ಟ ದ್ದನ್ನು ಶ್ರೀ ರಾಮಚಂದ್ರನ್ನರು ನನಗೆ ಕಳುಹಿಸಿ ಕೊಟ್ಟಿದ್ದರು.

ಸುಭಾಷ್‌ ನಗರದ ಅಧಿನೇಶನಕ್ಕೆ ಮೈಸೂರಿನಿಂದ ಮೈಸೂರು ಪತ್ರಿ ಕೆಯ ಸಂಪಾದಕರಾದ ಶ್ರೀ ಟಿ. ನಾರಾಯಣರಾಯರುಬಂದಿದ್ದರು. ಅವ ರಿಗೆ ನನ್ನ ಬಗ್ಗೆ ವಿಶೇಷ ಕನಿಕರ ಹುಟ್ಟಿತ್ತು. ಮೈಸೂರಿಗೆ ಬಂದರೆ ತಾವು ತಮ್ಮ ಕೈಲಾದ ಸಹಾಯ ಮಾಡುವುದಾಗಿ ತಿಳಿಸಿದ್ದರು. ಅದರ ಮೇಲೆ ನಾನು ನವೆಂಬರ” ೨೪ಕ್ಕೆ ಮೈಸೂರಿಗೆ ಹೋದೆ.

ಮೈ ಸೂರು ನನ್ನ ನಿದ್ಯಾರ್ಥಿ ದೆಸೆಯಿಂದ ರಾಜಕೀಯಕಾರ್ಯ ಕ್ಷೇತ್ರ ವಾಗಿತ್ತು. ಅಲ್ಲಿಯೇ ನನ್ನ ಪ್ರಥಮ ಕನಸನ್ನು ಕಾರ್ಯಕ್ರಮ ಮಾಡಲು ಪ್ರಾರಂಭಿಸಿದ್ದು. ಆರು ವರ್ಷದಲ್ಲಿ ನನ್ನ ಗೆಳೆತನ ಮತ್ತು ಬಾಂಧವ್ಯ ಚೆನ್ನಾಗಿ ಬೆಳೆದಿತ್ತು... ಸಾಮಾನ್ಯವಾಗಿ ಮೈಸೂರು ನಗರದಲ್ಲಿ ನನಗೆ ಬಹಳ ಮಂದಿ ಪರಿಚಿತರಿದ್ದರು. ನನಗಿನ್ನು ಮೂರು ಸಾವಿರ ರೂಪಾಯಿ ಬೇಕಾ ಗಿತ್ತು. ಡಿಸೆಂಬರ್‌ ೫ನೇ ತಾರೀಖಿನೊಳಗೆ ಹಣ ಕಟ್ಟಿ ದಿದ್ದರೆ ನನಗೆ ವೀಸಾ ಸಿಕ್ಕದೆ ನನ್ನ ಪ್ರಯಾಣವೇ ನಿಲ್ಲುನ ಸ್ಥಿತಿಯಲ್ಲಿತ್ತು. ಇನ್ನೆಂಟು ದಿನಗಳಲ್ಲಿ. ಮೂರು ಸಾವಿರ ರೂಪಾಯಿ. ಸಾಧಿಸಬೇಕಾಗಿತ್ತು. ಮೊದಲಿನಿಂದ ಮಾಡಿದ ಸಾಹಸದ ವಿನರವನ್ನೆಲ್ಲಾ ಶ್ರೀ ನಾರಾಯಣರಾಯರಿಗೆ ತಿಳಿಸಿದೆ. ಶ್ರೀ ರಾಯ ರನ್ನು ನಾನು ಪರಿಚಯ ಮಾಡಿಕೊಂಡಿರಲಿಲ್ಲ. ನಾನು ಚಳುವಳಿಯ ಕಾಲಕ್ಕೆ ಅವರ ವಿರುದ್ಧ ಜಗಳವಾಡಿದ್ದೆ. ನನಗೂ ಅವರಿಗೂ ಇದ್ದ ಒಂದೇ ಒಂದು ಸಂಬಂಧನೆಂದರೆ, ಅನರು ಪತ್ರಿಕೋದ್ಯನಿಯಾಗಿದ್ದುದು, ನಾನು

೧೯

ಸಾಗರದಾಜಿ

ಪತ್ರಿಕೋದ್ಯಮವನ್ನು ಕಲಿಯಲಿಕ್ಕೆ ಹೋಗುತ್ತಿದ್ದುದು. ಸಂಬಂಧವೇ ನಮ್ಮಿಬ್ಬರನ್ನು ಹತ್ತಿರಕ್ಟೆ ತಂದಿತ್ತು. |

ನವೆಂಬರ್‌ ೨೬, ೨೭, ೨೮ ಮೂರು ದಿನ ಇಬ್ಬರೂ ನಿಧಿಗಾಗಿ ಅಲೆಯಬೇಕೆಂದು ತೀರ್ಮಾನವಾಯಿತು. ಸುಮಾರು ನಲವತ್ತು ಮಹನೀ ಯರ ಪಟ್ಟಿಯೊಂದನ್ನು ತಯಾರಿಸಿಜಿವು. ಶ್ರೀ ರಾಯರ ಟಾಂಗವನ್ನೇ ಹತ್ತಿ ಮೂರು ದಿನವೂ, ಅನ್ನ ನೀರಿಲ್ಲದೆ ಮನೆಮನೆಗೆ ಅಲೆಜಿವು. ಶ್ರೀ ರಾಯರ ಛಾತಿಯಿಂದ ಮೂರು ದಿನಗಳಲ್ಲಿ ಎರಡು ಸಾವಿರ ರೂಪಾಯಿ ಹಣ ಕೂಡಿಸಿದೆವು. ನಲವತ್ತು ಜನರಿಗೂ ನಾನು ಮೊದಲೇ ಪ್ರಾರ್ಥನಾ ಪತ್ರವನ್ನು ಕಳುಹಿಸಿಕೊಟ್ಟಿ ದ್ದನು. ನೂವು ಹೋದಕೂಡಲೇ ನಮ್ಮನ್ನು ಬರೀ ಕೈಯಲ್ಲಿ ಹಿಂತಿರುಗಿ ಯಾರೂ ಕಳುಹಿಸಲಿಲ್ಲ. ಇಲ್ಲಿಗೆ ಒಂಭತ್ತು ಸಾವಿರ ರೂಪಾಯಿ ಸೇರಿತು. ಧೈರ್ಯ ಬಂದೊದಗಿತು. ವೇಳೆಗೆ ಪತ್ರಿಕೆಗಳಲ್ಲಿ ನಾನು ಮಾಡುತ್ತಿ ರುವ ಕೆಲಸದ ಬಗ್ಗೆ ಪ್ರಕಟವಾಗಿತ್ತು. We ಮೇಲೆ ಶಿವಮೊಗ್ಗೆ ಗೆಳೆಯರೊಬ್ಬ ರು ನನ್ನನ್ನು ಅಲ್ಲಿಗೆ ಬರ ಬೇಕೆಂದು ಕರೆದರು.

ಶಿವಮೊಗ್ಗಿ ಹೂ ಜಿಲ್ಲೆ. ಭಾರತದ ಪಾರ್ಲಿಮೆಂಟಿನ ಸದಸ್ಯ ಜೆ ಶ್ರೀ ಎಸ್‌. ನಿ. ಕೃಷ್ಣಮೂರ್ತಿ ರಾಯರು, ಶಿನಮೊಗ್ಗಿಯವರ ಪರವಾಗಿ ೫೦೦ ರೂಪಾಯಿಗಳನ್ನು ಕೊಟ್ಟರು. ಅಲ್ಲಿಂದ ದಾ: ನಣಗೆರೆಯಲ್ಲಿ ಶ್ರೀ ದೀಕ್ಷಿ ತರು ೫೦೦ ರೂಪಾಯಿಗಳನ್ನು “ಹೊಂದಿಸಿಕೊಟ್ಟ ರು.

ಇಲ್ಲಿಯವರೆಗೆ ನಾನು ನನ್ನ ಹುಟ್ಟು ಊರಾದ ಅನವಟ್ಟಗೆ ಹೋಗಿರ

ಲಿಲ್ಲ. ಅಲ್ಲಿಂದ ನನ್ನ ಲಂಗೋಓ ಗೆಳೆಯ ವೆಂಕೋಬನಕರೆ ಬಂದಿತು.

ನನಗಾಗಿ ಅಲ್ಲಿಯೂ ನಿಧಿ ಕೂಡಿಸಿಟ್ಟದ್ದರು. ಶ್ರೀ ನಾರಾಯಣ ಭಟ್ಟರು,

್ರ ಓಂಕಾರಪ್ಪ ನವರು ತಲಾ ಜಿ. ಕೊಟ್ಟ ರು. ಇದಲ್ಲದೆ ಕಿ ಸ್ವಲ್ಪ ಹಣವನ್ನು. ಇತರರೂ ಕೊಟ್ಟರು.

ಇಂ

ಕನಸು-ನನಸು

ನನ್ನ ಕಷ್ಟ ಮುಗಿಯಿತೆಂದುಕೊಂಡೆ. ಯೋಚಿಸಿದ್ದಕ್ಕಿಂತ ಹೆಚ್ಚಾಗಿ ಒಂದು ಸಾವಿರ ರೂಪಾಯಿ ಶೇಖರವಾಗಿತ್ತು. ಇನ್ನು ಉಳಿದ ಸಿದ್ಧತೆ ಗಳನ್ನು ಮಾಡಿಕೊಳ್ಳಲು ಪ್ರಾರಂಭಮಾಡಿದೆ. ವೃತ್ತಪತ್ರಿಕೆಗಳಲ್ಲಿ ನನ್ನ ಬಗ್ಗೆ ಲೇಖನಗಳು ಬಂದವು. ನಾನು ಮಾಡುತ್ತಿರುವ ಕಾರ್ಯವನ್ನು ಪ್ರಶಂಶಿಸಿದ್ದರು. ನಾನು ಅಮೇರಿಕೆಗೆ ಹೋಗುವುದು ಖಂಡಿತವಾಯಿತು. ಅಮೇರಿಕನ್‌ ವೀಸಾವು ಕೂಡ ಹೊತ್ತಿಗೆ ಸರಿಯಾಗಿ ಬಂದಿತು.

ಸತ್ವಾರ ಕೂಟಗಳು ನನ್ನ ಬಗ್ಗೆ ಏರ್ಪಾಡಾದುವು. ಮೈಸೂರಿನಲ್ಲಿ ಪತ್ರಿಕೋದ್ಯೋಗಿಗಳ ಸಂಘವು ನನ್ನನ್ನು ಬರಮಾಡಿಕೊಂಡು ಆದರಿಸಿತು. ಜರಿಯ ಪತ್ರಿಕೋದ್ಯಮಿಗಳಾದ ಶ್ರೀ ಕೃಷ್ಣರಾಯರು ಶ್ರೀಲ್ನಿ ಅಗರಂ ರಂಗಯ್ಯನವರು, ಶ್ರೀ ಟ. ನಾರಾಯಣರಾಯರು, ಶ್ರೀ ಗೋಪಾಲ ಕೃಷ್ಣ ಸೆಟ್ಟಿರು, ಶ್ರೀ ಎಂ. ಎನ. ಜೋಯಿಸರು ಮುಂತಾದನರು ನನ್ನ ಬಗ್ಗೆ ಮಾತನಾಡಿ ಆಶೀರ್ವದಿಸಿದರು. ಹಾಗೆಯೇ ಓರಿಯಂಟಲ್‌ ಇಂಡ ಸ್ಪ್ರೀಸ್‌ ಮಾಲಿಕರಾದ ಶ್ರೀ ಬಿ. ಎಸ. ಸುಬ್ಬರಾಯರೂ, ಶ್ರೀ ಎಂ. ಆರ್‌. ಸಿ, ಬಸಪುನನರೂ ನನ್ನನ್ನು ಬರಮಾಡಿಕೊಂಡು ಉಪಚರಿಸಿದರು.

ಬೆಂಗಳೂರಿಗೆ ಬರಬೇಕೆಂದು ಕರೆಬಂತು. ಬೆಂಗಳೂರು ನಗರದ ಪತ್ರಿಕೋದ್ಯಮ ಸಂಘದ ಅಧ್ಯಕ್ಷರಾದ ಶ್ರೀ ಕೆ. ಜೀನಣ್ಣರಾಯರ ಮುಂದಾಳುತನದಲ್ಲಿ ನನಗೊಂದು ಸತ್ಪಾರಕೂಟಿವಾಯಿತು. ಅಖಿಲ ಮೈಸೂರು ಪತ್ರಿಕೋದ್ಯಮ ಸಂಘದ ಅಧ್ಯಕ್ಷರಾದ ಶ್ರೀ ಗೌಸ*ಮೋಹಿ ಯುದ್ದೀನ್‌ ಸಾಹೇಬರು, ಶ್ರೀ ವಿ. ಎಸ್‌. ನಾರಾಯಣರಾಯರು ನನ್ನನ್ನು ಆಶೀರ್ವದಿಸಿದರು. ಬೆಂಗಳೂರು, ಮೈಸೂರು ಸ್ನೇಹಿತರುಗಳನ್ನು ಬೀಳ್ಕೊಂಡು ಬೊಂಬಾಯಿ ಅಭಿಮುಖವ:ಗಿ ಶಿವಮೊಗಿ ಗೆ ತೆರಳಿದೆನು.

ಶಿವಮೊಗ್ಗ ನನ್ನ ಹುಟ್ಟು ಜಿಲ್ಲೆ. ನನ್ನ ಚಿಕ್ಕಂದಿನ ದಿನಗಳನ್ನು- ನಾಲ್ಕು ವರ್ಷ-ಕಳದ ಊರು. ನನ್ನ ಸ್ನೇಟತರಾದ ಶ್ರೀ ದಿನಕರ್‌,

ಖಗ

ಸಾಗರದಾಜೆ

ಶ್ರೀ ರಾಜಗೋಪಾಲ್‌, ಶ್ರೀ ನಾಗಪ್ಪಶಿಟ್ಟಿರು, ನನ್ನನ್ನು ಬಿಡಲೇ ಇಲ್ಲ. ನನ್ನ ಬಗ್ಗೆ ನಿಶ್ವಾಸ ಓಜ, ಈಸು ನಿಧಿಯೊಂದನ್ನು ಕೊಟ್ಟರು.

ಶಿವಮೊಗ್ಗಿಯ ಪತ್ರಿಕೋದ್ಯೋಗಿ ಸಂಘದ ಅಧ್ಯಕ್ಷರಾದ ಶ್ರೀ ಜಿ ಶ್ರೀನಿವಾಸ ಐಯ್ಯಂಗಾರ್ಯರು ನನ್ನನ್ನು ಸಂ ಲೈ ಬರಮಾಡಿಕೊಂಡು ಹಾರ ತುರಾಯಿಗಳನ್ನರ್ಸಿಸಿದರು.

ಅಖಿಲ ಕರ್ನಾಟಿಕ ವಿದಾ ್ಯಾರ್ಥಿ ಹ. ಅಧಿವೇಶನ ಶಿವಮೊಗ್ಗಿ ಯಲ್ಲಿ ಕೂಡಿತ್ತು. ವಿದ್ಯಾರ್ಥಿ ಕಾಂಗ್ರೆಸ ಸಂಸ್ಥೆ ಯಲ್ಲಿ ನಾನು ಸ್ತಳ) ಸೇನೆ ಸಲ್ಲಿಸಿದ ಕರಣ, ಅಖಿಲ ತ್‌ ವಿದ್ಯಾ ರ್ಥ ಕಾಂಗ್ರೆಸ ಸುನ ನನಗೆ ಶಿವಮೊಗ್ಗಿ ಯಲ್ಲಿ ಅಧಿವೇಶನದ ಕಾಲದಲ್ಲಿ ಸಾರ್ವಜನಿಕ ಸತ್ಪಾರ ಸಭೆಯೊಂದನ್ನು ಕರೆದರು. ಸುಪ ಪ್ರಸಿದ್ಧ ಪತಿ ತ್ರಿಕೋದ್ಯ ಮಿಗಳಾದ ಶ್ರೀ ಸಿದ್ದವ್ವನಹಳ್ಳಿ ಕೃಷ್ಣಶರ್ಮರು ಅಧ್ಯಕ್ಷತೆ ವಹಿಸಿದ್ದರು. ಗೆಳೆಯರಾದ ಶ್ರೀ ಖಾದ್ರಿ ಶಾಮಣ್ಣ, ಶ್ರೀ ಹೆಚ್‌. ಕೆ. ಕುಮಾರಸ್ವಾಮಿ: ಮಂಗಳೂರಿನ ಶ್ರೀರ್ವ. ಎಸ್‌. ಹೊಳ್ಳ, ಬೆಳಗಾವಿಯ ಶ್ರೀ ಕುಲಕರ್ಣಿ, ವಿದ್ಯಾರ್ಥಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಹಾರ್ನಹಳ್ಳಿ ರಾಮಸ್ಸಾಮಿ ಮುಂತಾದವರು ನನ್ನ ಬಗ್ಗೆ ಮಾತನಾಡಿ ಪ್ರೀತಿ ವಿಶ್ವಾಸವನ್ನು ತೋರಿಸಿ ದರು. ಅಣ್ಣ ಕೃಷ್ಣಶರ್ಮರು ನನ್ನನ್ನು ಹರಿಸಿದರು. ನಾನೂ ತುಂಬಿದ ಹೃದಯದಿಂದ ನಾಲ್ಗು ಮಾತು ಆಡಿದೆ. ಆತ್ಮೀಯರ, ಗೆಳೆಯರ, ಹಿರಿ ಯರ ಮತ್ತು ವಿಶ್ವಾಸಿಗಳ ಮಮತೆ ನನ್ನನ್ನು ಮುಗ್ಗನನ್ನಾಗಿ ಮಾಡಿ ದವು. ಸಭೆಯಲ್ಲಿ ಸೇರಿದ ಹತ್ತು ಸಾವಿರ ಜನ ಚಪ್ಪಾಳೆ ಹೊಡೆದಾಗ ನನ್ನ ಕಂಠ ಬಿಗಿದು ಬಂದಿತ್ತು. ಜನರ ಹರಕೆಗೆ ನಾನು ಪಾತ್ರ ನಾಗುವಂತೆ ನಡೆದೇನೆ? ಎಂಬ ಭಯ ತಲೆದೋರಿದ್ದರೂ ಜನ ಕೊಟ್ಟಿ ನಂಬಿಕೆಗೆ ೈತಜ್ಞತೆ ಯನ್ನು ತೋರಿಸಿ ವಂದಿನಿಬೆನೆ. ಶಿವಮೊಗ್ಗಿಯಲ್ಲಾದ ಸಭೆಯ. ಸನ್ಮಾನ ವನ್ನು ಎಂದೂ ನಾನು ಮರೆಯುವಂತಿಲ್ಲ.

ವಿವಿ

ಕನಸು.ನನಸು

ಜನವರಿ ೧೯ನೇ ತಾರೀಖು ಆನನನಟ್ಟಗೆ-ನನ್ನ ಹುಟ್ಟೂರಿಗೆ-ಬಂ ದೆನು. ನನ್ನ ಊರಿನವರ ಹೆಮ್ಮೆಗೆ ಮಿತಿಯೇ ಇರಲಿಲ್ಲ. ನಮ್ಮ ಮನೆಯ ಲಂತೂ ಒಂದು ಕಡೆ ಸಂಭ್ರಮ, ಇನ್ನೊಂದು ಕಡೆ ದೂರ ದೇಶಕ್ಕೆ ಬಹಳ ಕಾಲ ಹೋಗುವುದರಿಂದಾಗುವ ಅಗಲಿಕೆಯ ದುಃಖ. ಉಭಯ ಸಂಕಟದಲ್ಲಿ ಸಿಕ್ಕಿದ ನನ್ನ ತಂಡಿ ತಾಯಿಯನರ ಸ್ಪಿತಿಯನ್ನಂತೂ ನಾನು ನರ್ಣಿಸಲಾರೆ. ನನ್ನ ಓಡಾಟದಲ್ಲಿ ಆನವಟ್ಟಿಯಲ್ಲಿ ಒಂದು ದಿನವೂ ನಾನು ಹೆಚ್ಚಾಗಿ ನಿಂತುದಿಲ್ಲ. ಈಗಲೇ ಎರಡು ದಿನದ ಬಿಡುವಿತ್ತು. ನನ್ನ ತಾಯಿ ನನಗೆ ಇಷ್ಟವಾದ ಕೇಸರಿಭಾತ್‌, ಕೋಡಬಳ್ಳೆ ಮೊಸರುಭಜ್ಜಿ, ಟೋಮಾಟೊ ಸಾರು, ಕೆನೆಮೊಸರು ಅನ್ನ ಮುಂತಾದ ತಿಂಡಿಗಳನ್ನು ಮಾಡಿ ಹಾಕಿದರು. ನನ್ನ ಅತ್ತಿಗೆಯರು ಎಂದಿಗಿಂತ ಒಂದು ಲೋಟ ಹೆಚ್ಚು ಕಾಫಿಯನ್ನೆೇ ಕೊಡುತ್ತಿದರು. ಮನೆಯ ಹುಡುಗರಂತೂ ನಾನು ಇನ್ನು ಬರುವುದೇ ಇಲ್ಲವೆಂದು ತಿಳಿದು ಆಗಲೇ ಕಾಸು ಕೇಳುವುದಕ್ಕೆ ಪ್ರಾರಂಭಿಸಿದ್ದರು. ನನ್ನ ಸ್ನೇಹಿತ ವೆಂಕೋಬ ನನಗೊಂದು ಸನ್ಮಾನ ಸಭೆಯನ್ನು ನೆರೆಯಿಸಿದ. ಊರಿನ ಹಿರಿಯರಾದ ಶ್ರೀ ಭೀಮರಾಯರು ಅಧ್ಯಕ್ಷರಿದ್ದರು. ಹಳ್ಳಿಯ ಕಡೆಯಿಂದ ಅನೇಕರು ನನ್ನನ್ನು ಬೀಳ್ಕೊಡಲು ಬಂದಿದ್ದರು. ನಿದ್ಯಾರ್ಥಿ ದೆಸೆಯಿಂದಲೂ ನನ್ನ ಗೆಳೆಯರಾದ ಶ್ರೀ ಮಾಧವ ರಾಯರು, ಶ್ರೀ ನಾರಾಯಣ ಭಟ್ಟರು, ನಮ್ಮೂರಿನ ಜನಪ್ರಿಯ ಡಾಕ್ಟರ ರಾದ ಶ್ರೀ ಜಿ. ಶ್ರೀನಿನಾಸ ಅಯ್ಯರ್‌ ರವರು ನನ್ನನ್ನು ಪ್ರಶಂಶಿಸಿ ಮಾತ ನಾಡಿದರು. ನಮ್ಮ ತಂದೆಯವರಾದ ಶ್ರೀ ನರಸಿಂಗರಾಯರು ನನ್ನ ಸಕ್ಕದ ಲಿಯೇ ಕುಳಿತಿದ್ದರು. ಅನರ ಅಭಿಮಾನವಂತೂ ಹೇಳತೀರದು. ಅನರಿಗೆ ಹೆಮ್ಮೆಯೇನೋ ಇತ್ತು. ಆದರೆ ಮಗ ವಿಲಾಯಿತಿಗೆ ಹೋಗಿ ಎಲ್ಲಿ ಜಾತಿಗೆಡು ವನೋ ಎಂಬ ಭಯವಿತ್ತು. ನಾನು ಅನರಿಗಾಗಿ ಶ್ರೀ ಮಂತ್ರಾಲಯಕ್ಕೆ ಹೋಗಿ, ಶ್ರೀ ರಾಘನೇಂದ್ರಸ್ಥಾನಿಗಳವರ ಅಪ್ಪಣೆ ಪಡೆದು ಬಂದಿದ್ದೆ. ಅದಷ್ಟು ಅವರಿಗೆ ಶಾಂತಿ ಕೊಟ್ಟಿತ್ತು. ಮತ್ತು ನಾನು ಅವರಿಗೆ ಮಾತು ಕೊಟ್ಟಿದ್ದೆ, ಮದ್ಯ, ಮಾಂಸ, ಮಾನಿನಿ ಮುಂತಾದುವುಗಳನ್ನು ಮುಟ್ಟುವು

೨೫,

ಸಾಗರದಾಜಿ

ದಿಲ್ಲವೆಂದು. ಅದೂ ಅವರಿಗೆ ಸ್ವಲ್ಪ ಶಾಂತಿ ತಂದಿತ್ತು. ಬಿಗಿದ ಕಂಠದಿಂದ ಸಭೆಯಲ್ಲಿ ಮಾತನಾಡಿದೆ. ಆತ್ಮೀಯತೆಯ ತುಟ್ಟಿತುದಿ ಅಲ್ಲಿ ಮುಟ್ಟಿತ್ತು. ಹುಟ್ಟು ನಾಡಿನ ಅಂತಃಕರಣ ಉಕ್ಕಿ ಬಂದಿತ್ತು. ಮನೆಯನರ ಮಮತೆ ಕೂಡಿ ಮೂಡಿತ್ತು.

ನನ್ನೂರಿನ ಜನರನ್ನು ದ್ದೇಶಿಸಿ ಅಂದು ಮಾತನಾಡಿದ ಘಳಿಗೆ ನನಗಿನ್ನೂ ಜ್ಞಾ ಸಕದಲ್ಲಿದೆ. ಸುಮಾರು ಎರಡು ಸಂಟೆಗಳ ಕಾಲ ಮಾತನಾಡಿದ್ದಿರ ಬಹುದು. ನಾನು ಅಮೇರಿಕೆಯ ನಾಹಸಕ್ಕೆ ಪಟ್ಟಿ ಶ್ರಮನನ್ನೆಲ್ಲಾ ವಿವರವಾಗಿ ತಿಳಿಯಪಡಿಸಿ, ಊರವರ ಆಶೀರ್ವಾದವನ್ನು ಪಡೆದೆನು. ನನ್ನ ಜೀವನದಲ್ಲಿ ಸಭೆಯ ನೆನಪು ಅಚ್ಚಳಿಯದೆ ನಿಲುವುದು.

ಮರುದಿನ ಬಸ್ಸಿನಲ್ಲಿ ನಾನು ಹುಬ್ಬಳ್ಳಿಯ ಮಾರ್ಗವಾಗಿ ಬೊಂಬಾಯಿಗೆ ಹೋಗುವುದಿತ್ತು. ನನ್ನ ಗೆಳೆಯ ವೆಂಕೋಬ, ನನ್ನ ಹಿರಿಯಣ್ಣ ಬೊಂಬಾಯಿಯವರೆಗೂ ಜೊತೆಯಲ್ಲಿಯೇ ಬಂದರು. ಆನವಟ್ಟಿ ಯಲ್ಲಿ ಬಸ್ಸು ಹತ್ತುವ ವೇಳೆಗೆ ನಮ್ಮೂರೇ ಬಸ್ಸು ಫಿಲ್ದಾಣದಲ್ಲಿತ್ತು. ನಮ್ಮ ತಾಯಿ ತುಂಬಿ ಬಂದ ದುಃಖ ನುಂಗಿಕೊಂಡು, ನಗು ತೋರಿಸುವ ನೆಪದಲ್ಲಿ ಶಾಂತವದನರಾಗಿ ಮಂಕರಾಗಿ ನಿಂತುಬಿಟ್ಟಿದ್ದರು. ನಮ್ಮ ತಂದೆ ನನ್ನನ್ನು ಕಳುಹಿಸಿಕೊಡಲು ಮೈಸೂರು ಗಡಿಯವರೆಗೂ ಬಂದರು. ಊರಿನನರಿಗೆಲ್ಲಾ, ಹಿರಿಯರು, ಕಿರಿಯರು, ಗೆಳೆಯರು, ಎಲ್ಲರಿಗೂ, ಹೇಳಿ ಕೇಳಿ ಆದಮೇಲೆ, ಬಸ್ಸು "ಜೈ? ಕಾರಗಳ ಮಧ್ಯೆ ಊರು ಬಿಟ್ಟಿತು. ಕುತ್ತಿಗೆಯ ತುಂಬಾ ಭಾರವಾಗಿದ್ದ ನವಿರಾದ ಮಲ್ಲಿಗೆ ಮಾಲೆಗಳನ್ನು ಬದಿಗಿಟ್ಟು, ನಮ್ಮ ತಾಯಿಗೆ ನಮಸ್ಕರಿಸಿ, ತಿರುಗಿ ಬರುವೆನೆಂದು ಭರಸಸೆಕೊಟ್ಟು, ಮತ್ತೊಮ್ಮೆ ನೆರೆದಿದ್ದವರೆಲ್ಲರಿಗೂ ನಮಸ್ಕರಿಸಿ ನನ್ನ ಪ್ರಯಾಣ ಬೆಳೆಸಿದೆನು. | ಅಂದು ಬಸ್ಪಿನ$ ಸುಮಾರು ೬೦ ಜನ ಇದ್ದರು. ಎಲ್ಲರೂ ನನ್ನನ್ನು ಬೀಳ್ಳೊಡಲು ಗೊಂದಿ 3ರೆಗೆ ಬಂದರು. ಗೊಂದಿಯ ಬಳಿ ವರದಾನದಿ ಹನಿಯುವುದು. ಅದೇ ಮೈಸೂರು ನಾಡಿನ ಕೊನೆಯ ಸರಹದ್ದು.

ಮಿ೪

ಕನಸು-ನನಸು

ಅಲ್ಲಿಂದ ಪ್ರಾರಂಭವಾಗುವುದು ಬೊಂಬಾಯಿ ರಾಜ್ಯದ ಧಾರವಾಡ ಜಿಲ್ಲೆ. ನಮ್ಮ ಮನೆತನಕ್ಕೆ ತುಂಬಾ ಹತ್ತಿರದನರಾದ ಶ್ರೀ ಅಗಸನಹಳ್ಳಿ ನೆಂಕಟ ರಾಯರು ತಮ್ಮ ವ್ಳ ದಾ ಿಷ್ಯವನ್ನು es ರಲ್ಲಿ ಒಬ್ಬರಾಗಿದ್ದ ರು. ಗೊಂದಿಯಲ್ಲಿ ನನ್ಮು ಆಸ್ತರಾದ ಶ್ರೀ ಹನುನುಂತರಾಯರು "ಚಹಾ?

ರ್ನಡಿಸಿದ್ದರು. "ಅರ್ಥಗಂಟಿಯ ಠೂತ್ತಿಸೆ ಹುಬ್ಬಳ್ಳಿಗೆ ನಮ್ಮನ್ನು ಕರೆಜೊ ಯ್ಯುವ ಬಸ್ಸು ಬಂದಿತು. ಅದರಲ್ಲಿ ಕುಳಿತು ಇನ್ನೊಮ್ಮೆ ನನ್ನ ಹಿರಿಯರಾದ ತಂದೆಯವರಿಗೆ ನಮಸ್ತರಿಸಿ, ಹೊರಟೆನು.

ಹುಬ್ಬಳ್ಳಿಯಲ್ಲಿ ನೋಡುನನರನ್ನು ನೋಡಿ, ಧಾರವಾಡಕ್ಕೆ ಬಂದು

ಅಲ್ರಿ ನನು. ಸೋದರ ಮಾವನವರಾದ, ನಿನೃತ್ತ ಜಿಲ್ಲಾ ನ್ಯಾಯಾಧೀಶ,

ಶ್ರೀ ನಾಡಗೀರ ರಾನುನಾಥರಾಯರ ಹರತೆಯನ್ನು ಹೊತ್ತು ಬೆಳಗಾವಿಗೆ ಪ್ರಯಾಣ ಬೆಳೆಸಿದೆನು.

ಬೆಳಗಾವಿ ನನ್ನ ನಿಜವಾದ ಕಾರ್ಯರಂಗ ಸ್ಥಳ. ಬೆಳಗಾವಿಯ ಗೆಳೆಯರು, ಅಲ್ಲಿನ ವಿನ್ಯಾರ್ಥಿ ವಿದ್ಯಾರ್ಥಿನಿಯರು ಆದು ಶವಾದ ಸ್ವಾಗತ ವನ್ನು ನೀಡಿದರು. ಅಮೇರಿಕೆಯ ಕನಸನ್ನು ಕಂಡಿದ್ದು ನಾನು ಯಲ್ಲಿ. ಅದರ ಸವಿರೂಪು ಕೊಟ್ಟಿದ್ದು ಅಲ್ಲಿ. ಅದು ಕಾರ್ಯರೂಪವಾಗಿ ಹೋಗುವಾಗ ಬೆಳಗಾನಿಯ ಮೇಲೆ ನನಗೆಷ್ಟು ಅಭಿಮಾನ ಬರಬೇಡ! ಬೆಳಗಾವಿಯ ಗೆಳೆಯರ ಪೈಕೆ, ಮೂವರನ್ನು ಮರೆಯಲಾರೆ. ಕುಲಕರ್ಣಿ ಬಂಧುಗಳು ನನಗೆ ನೆರವಾಗದಿದ್ದತ್ತಿ ಬೆಳಗಾವಿಯಲ್ಲಿ ನಾವು ನಮ್ಮ ಕನ್ನಡದ ಚಟುವಟಕೆಗಳನ್ನು ಮಾಡಲು ಸಾಧ್ಯವಿರಲಿಲ್ಲ. ಅವರೇ ಶ್ರೀ ಆರ್‌. ಹೆಚ್‌. ಕುಲಕರ್ಣಿ, ಶ್ರೀ ವೆಂಕಟೇಶ ಕರಗುಪ್ಪಿ ಕುಲಕರ್ಣಿ, ಶ್ರೀ ಶ್ರೀನಿ ವಾಸ ಕುಲಕರ್ಣಿ.

ಶ್ರೀ ಗೋಖಲೆ ಕೇಶನರಾಯರ ಅಧ್ಯಕ್ಷ: ಕ್ಷತೆಯಲ್ಲಿ ನನಗೆ ಸನ್ಮಾನ ಸಭೆ ನಡೆಯಿತು. ಬೆಳಗಾವಿಯ ಕಾಂಗ್ರೆಸ್‌ ಭನನ ಜನರಿಂದ ಕಿಕ್ಕಿರಿದು ತುಂಬಿತ್ತು. ಶ್ರೀ ಜಯಜೇವಕುಲಕರ್ಣಿ, ಶ್ರೀ ಆರ್‌. ಹೆಚ್‌. ನನ್ನ

೨೫

ಸಾಗರದಾಜೆ

ಬಗ್ಗೆ ಮಾತನಾಡಿದರು. ಶ್ರೀ ಗೋಖಲೆ ಕೇಶವರಾಯರು ಬೆನ್ನು ತಬ್ಬಿ ದರು. ಬೆಳಗಾವಿಯ ಜನರ ಅಂತಃಕರಣ ನಾನು ಎಂದೂ ಮರೆಯಲಾರೆ.

ಬೆಳಗಾವಿಯಿಂದ ಮರುದಿನ ಹೊರಟ್ರು, ಜನವರಿ ೨೨ನೇ ತಾರೀಖು ಬೆಳಿಗ್ಗೆ ನಾವು ಜೊಂಬಾಯಿ ಸೇರಿದೆವು. ನನ್ನ ಗೆಳೆಯ ಶ್ರೀ ಹಾರ ಹಳ್ಳಿ ರಾಮಸ್ವಾಮಿ ಬೆಳಗಾವಿಯಿಂದ ನನ್ನೊಡನೆ ಬೊಂಬಾಯಿಗೆ ಹೊರಟರು. ರೈಲ್ವೆ ನಿಲ್ದಾಣಕ್ಕೆ ನನ್ನ ಗೆಳೆಯರಾದ ಸಂಜೀವರಾಯರು ಬಂದಿದ್ದರು, ನೇರವಾಗಿ ಕೃಷ್ಣ ಕುಂಜಕ್ಕೆ ಹೊರಟಿವು. ಮರುದಿನ ನೇತಾಜಿ ಸುಭಾಷ ಚಂದ್ರರ ಹುಟ್ಟಿದ ದಿನವಿತ್ತು. ಬೊಂಬಾಯಿನಲ್ಲಿ ನಡೆದ ಅಂದಿನ ಸಭೆ ಯನ್ನು ಮುಗಿಸಿಕೊಂಡು ಕೆಲವು ಸಾಮಾನುಗಳನ್ನು ಕೊಂಡು, ಪ್ರಥಮ ಸಲ ಬೊಂಬಾಯಿಗೆ ಬಂದಿದ್ದ ಹಿರಿಯಣ್ಣ ನವರಿಗೆ ಬೊಂಬಾಯಿ ತೋರಿಸಿ ಕಾಲ ಕಳೆದೆವು.

ನನಗಿನ್ನೂ ಮದರಾಸಿನಿಂದ ಅಮೇರಿಕನ್‌ ನೀಸಾನೇ ಬಂದಿರಲಿಲ್ಲ. ಅಮೇರಿಕನ್‌ ಎಕ್ಸ್‌ಪ್ರೆಸ್‌ ಕಂಪೆನಿಗೆ ಹೋಗಿ ವಿಚಾರಿಸಲಾಗಿ ಅಲ್ಲಿಯೂ ಬಂದಿರಲಿಲ್ಲ. ಹಡಗು ಹತ್ತಲು ಇನ್ನು ಮೂರೇ ದಿನಗಳಿತ್ತು. ಏನೂ ತೋಚದಾಯಿತು. ಸರಿ ಸಂಜೀವನನ್ನು ನಿಮಾನದ ಮೂಲಕ ಮದರಾ ನಗೆ ಕಳುಹಿಸಿ ವೀಸಾ ತರಿಸಬೇಕೆಂದು ನಿರ್ಧರಿಸಿದೆನು... ಸಂಜೀವನೂ ಹೋಗುವುದಾಗಿ ಒಪ್ಪಿದನು ಆದರೆ ಅವನಿಗೆ ಅದೇ ಪ್ರಥಮ ವಿಮಾನ ಪ್ರಯಾಣ. ಮೊದಲು ಸ್ವಲ್ಪ ಹಿಂತೆಗೆದನಾದರೂ, ನನ್ನ ಮೇಲಿನ ವಿಶ್ವಾಸದಿಂದ ಹೋಗಲು ಒಪ್ಪಿದನು. ಇನ್ನೇನು ನಾವು ಅನನ ವಿಮಾನ ಪ್ರಯಾಣವನ್ನು ಗೊತ್ತುಮಾಡುವುದರಲ್ಲಿದ್ದೆವು. ಆಗ ಶೌರಿಯು ಬಂದು ನಮ್ಮನ್ನು ಕೂಡಿದನು. ನಮ್ಮ ಗಡಿಬಿಡಿಯನ್ನು ನೋಡಿ ಅನನು ಮರುದಿನ ದವರೆಗೆ ತಡೆಯಬೇಕೆಂದು ಸಲಹೆಯಿತ್ತನು. ಮರುದಿನ ಅಮೇರಿಕನ್‌ ವೀಸಾ ಅಮೇರಿಕನ್‌ ಎಕ್ಸ್‌ಪ್ರೆಸ್‌, ಕಚೇರಿಗೆ ಬಂದಿತ್ತು. ನಮ್ಮ ಗಾಬರಿ ತಣ್ಣ ಗಾಯಿತು. ಶೌರಿಯ ಸಲಹೆಯಿಂದ, ಶ್ರಮ ಕಡಿಮೆಯಾಯಿತು.

ವಿ೬

ಕನಸು-ನನಸು

ಬೊಂಬಾಯಿ ಕರ್ನಾಟಿಕ ಸಂಘದಲ್ಲಿ ೨೪ನೇ ತಾರೀಖು ನನಗೊಂದು ಸನ್ಮಾನ ಸಭೆ ಇಟ್ಟಿದ್ದರು. ಧಾರವಾಡದ ಸುಪ್ರಸಿದ್ದ ವಕೀಲರಾದ ಶ್ರೀ ನಲವಡಿಯವರು ಅಧ್ಯಕ್ಷರಾಗಿದ್ದರು. ಶ್ರೀ ವಿ.ಎಂ. ಇನಾಂದಾರ್‌ ಶ್ರೀ ಇಮಾರತಿ ಹನುಮಂತರಾಯರು, ಶ್ರೀ ವರದರಾಜ ಆದ್ಯರವರು, ಶ್ರೀ ಹೆಚ್‌. ಎಸ್‌ ಪಾಟೀಲರು, ಸಭೆಯಲ್ಲಿ ಮಾತನಾಡಿದರು. ಅದೇ ನನ್ನ ಸನ್ಮಾನ ಸಭೆಗಳಲ್ಲಿ ಕೊನೇ ಸಭೆ. ಬೊಂಬಾಯಿ ಕನ್ನಡಿಗರು ಇತ್ತ ಸತ್ಪಾರಕ್ಕೆ ಅಭಿನಂದಿಸಿ, ಅಮೇರಿಕೆಯಲ್ಲೂ ಕನ್ನಡ ಪತಾಕೆಯನ್ನು ಹಾರಿ ಸುವೆನೆಂದು ತಿಳಿಸಿದೆನು. ನನ್ನ ಹೃದಯ ತುಂಬಿ ಬಂದಿತ್ತು. ಬೊಂಬಾಯಿ ಮಹಾ ನಗರ, ನನ್ನ ಸಾಹಸದ ಬೀಡಾಗಿದ್ದು, ನಾನು ಯೋಚಿಸಿದ ಯೋಜ ನೆಗಳ ತವರಾಗಿತ್ತು. ಅರಬ್ಬೀ ಸಮುದ್ರದ ದಂಡೆಯ ಮೇಲೆ ಕುಳಿತು ಭಾವನಾಸರವಶನಾಗಿ, ಕೆಲವು ಸಲ ಸ್ಫೂರ್ತಿಯನ್ನು ಸಡೆದದ್ದು. ಇನ್ನು ಕೆಲವು ಸಲ ನಿರಾಶೆಯನ್ನು ಹೋಗಲಾಡಿಸಿಕೊಂಡದ್ದು, ಮತ್ತೆ ಕೆಲವು ಸಲ ಶಾಂತತೆಯನ್ನು ಪಡೆದದ್ದು, ಬೊಬಾಯಿಯಲ್ಲಿಯೇ. ಸವಿ ನೆನಪು ಯಾವಾಗಲೂ ಅಲ್ಲಿ ಆಗುತ್ತಿತ್ತು. |

ಸಂದರ್ಭದಲ್ಲಿ ಕಾಮರ್ಸ್‌ ಪತ್ರಿಕೆಯ ಸಂಪಾದಕರಾದ ಶ್ರೀ ಆರ್‌. ವೆಂಕಟೇಶಮೂರ್ತಿಯವರನ್ನು ನಾನು ಮನಸಾರೆ ನೆನಸಿಕೊಳ್ಳು ತ್ರೇನೆ. ನಾನು ಯಾವಾಗ ಬುದ್ದಿವಾದ ಕೇಳಲು ಹೋದಾಗಲೂ, ಆದರ ದಿಂದ ಬರಮಾಡಿಕೊಂಡು ಸಲಹೆ ನೀಡುತ್ತಿದ್ದರು. ನನ್ನ ಅಮೇರಿಕಾ ಪ್ರವಾಸಕ್ಕೆ ಸ್ಫೂರ್ತಿ ತುಂಬಿದನರಲ್ಲಿ ಅನರೂ ಒಬ್ಬರು. ಅವರೂ ನನ್ನನ್ನು

ಊಟಕ್ಕೆ ಕರೆದು ಸತ್ಕರಿಸಿದರು.

ಕೊನೆಗೂ ಬಂದೇ ಬಿಟ್ಟಿತು ದಿನ. ನಾನು ಅಮೇರಿಕೆಗೆ ಹೊರಡುವ ದಿನ ನನ್ನ ಪ್ರಯಾಣದಲ್ಲಿ ಶುಭಕೋರಿ ನೂರಾರು ಪತ್ರಗಳು ಬಂದಿದ್ದುವು. ಶ್ರೀ ರಂಗನಾಫ ದಿವಾಕರರು ಮತ್ತು ಶ್ರೀ ನಿಜಲಿಂಗಪ್ಪನವರು ನನ ದೆಹಲಿಯಿಂದ ಪತ್ರ ಬರೆದು ನನ್ನನ್ನು ಅಶೀರ್ವದಿಸಿದ್ದರು. ಅಮೇರಿಕೆಯ

ಇಓ

ಸಾಗರದಾಜೆ

ರಾಯಭಾರಿಗಳಾದ ಶ್ರೀ ಅಸಫ್‌ ಅಲ್ಲಿಯನರಿಗೆ ಸರಿಚಯ ಪತ್ರ ಬರೆದು ಕಳುಹಿಸಿಕೊಟ್ಟ ದ್ದರು, ಮೈಸ ಸೂರಿನಿಂದ ತ್ರೀಕೆ. ಟ. ಭಾಷ್ಯಂ ಐಯ್ಯಂ ಗಾರ್ಯರು, ಶ್ರೀ ಕೆಸಿ ರೆಡ್ಡಿಯನರು, ಶ್ರೀ ಗೊರೂರು ರಾಮಸಾಮಿ ಐಯ್ಯಂಗಾರ್ಯರು, ಶ್ರೀ ಎ. “ಆರ್‌. ಕೃಷ್ಣ ಶಾಸ್ತ್ರಿಗಳು ಶ್ರೀ ಎಸ್‌. ನಿ. ಕೃಷ್ಣ ES ತಾಸ ಡು ನನ್ನ ಪ್ರಯಾಣಕ್ಕೆ ಶುಭ ಕೋರಿ ಕಾಗದ ಬರೆದಿದ್ದರು. ಎಲ್ಲರಿಗೂ ಉತ್ತರವನ್ನು ಬರೆದು, ಅವರಿತ್ತ ಹರಕೆಗಳಿಗೆ ನಂದಿಸ್ಕಿ ಆಶೀರ್ವಾದವನ್ನು ಹೊತ್ತು ಅಮೇರಿಕೆಯತ್ತ ಪ್ರಯಾಣ ಮಾಡಲು ಹಡಗನ್ನೇರುವ ಸಿದ್ಧತೆಯಲ್ಲಿ ತೊಡಗಿದೆನು.

ಭಾರತಾದ್ಯಂತವೂ ನಡೆಯುತ್ತಿರು: ' ಪವಿತ್ರವಾದ ಸ್ಟಾತಂತ್ರ; ದಿನಾಚರಣೆಯ ದಿನವೇ ನಾನು ಅಮೇರಿಕೆಗೆ ಹೋಗಲು ಹಡಗು ಹತ್ತಿದೆ. ಸ್ಟಾತಂತ್ರ್ಯ ಸುಧೆಯನ್ನು ಸವಿಯುತ್ತಿರುವ ನಾಡಾದ ಅಮೇರಿಕೆಗೆ ನಾನು ಹೊರಟಿ, ವ್ಯಕ್ತಿ ಸ್ಥಾ ತಂತ್ರ, ಪತ್ರಿಕಾ ಸ್ವಾತಂತ್ರ 3 ಉಚ್ಛ್ರಾ ಯಸ್ಥಿತಿ ಯಲ್ಲಿರುವ ಅಮೇರಿಕೆಯಲ್ಲಿ ಪತ್ರಿಕಾ ವ್ಯವಸಾಯದ ಬಗ್ಗೆ ಉಚ್ಚ ಶಿಕ್ಷಣ ಹೊಂದಲು ಒಂದು ವಿಶೇಷ ಜವಾಬಾ _ರಿಯನ್ನು ಹೊತ್ತೇ. ಸಾಗ ದಾಟಿ ನಾನು ಸಾಗಿದ್ದೆ.

ನನ್ನ ಕಣ್ಣಾಶ್ರಮವಾಗಿದ್ದೆ ಕೃಷ್ಣಕುಂಜವನ್ನು ಬಿಟ್ಟು ಬರುವಾಗ ನನಗದೆಷ್ಟು ವೃಥೆಯಾಯಿತೋ | ಗೆಳೆಯ ಸಂಜೀವ ನನ್ನ ಕನಸಿಗೆ .ಕಾವು ಕೊಟ್ಟು ತನಿ ಎತೆದಿದ್ದ, ಅಮೇರಿಕೆಯ ಪ್ರವಾಸದ ಕಾರ್ಯಕ್ರಮ, ಸಿದ್ಧತೆ ಮಾಡಿಕೊಂಡ ಕಾರ್ಯಭೂಮಿ ಅದಾಗಿತ್ತು. ಕೃಷ್ಣ ಕುಂಜ `ನನ್ನ ಸಾಧನ ಮಂಟಿಸವಾಗಿತ್ತು. ಸಂಜೀವ ಮತ್ತು ಶೌರಿ ನನ್ನ ಡಂ ಕಣ್ಣು "ಆಗಿದ್ದರು, ಕೈದೀನಿಗೆಯನ್ನ ವರು ಹಿಡಿದು ತೋರಿದತ್ತ ನಡೆಯುತಲಿದ್ದ ವಿಧಿಯ ಕ್ಸ ಗೊಂಬೆ ನಾನಾಗಿದ್ದೆ.

ಕೃಷ್ಣ ಕುಂಜದಲ್ಲಿ ನನಗಾಗಿ ಹಬ್ಬ, ಸಂಭ್ರಮವೇ ಸಂಭ್ರಮ. ಸಂಜೀವ, ಸೆಳೆಯ ಲಕ್ಷ್ಮ, ಣರಾಯರು ಸಂಪೂರ್ಣ ಅಡುಗೆಯ ಭಾರವನ್ನು

5೮

ಕನಸು-ನನಸು

ಹೊತ್ತು ನನಗೆ ಇಷ್ಟ ಬರುವ ಪದಾರ್ಥಗಳನ್ನೇ ಮಾಡಿದ್ದರು. ನೀರುಳ್ಳಿ ಹುಳ್ಳಿ ಟೊಮಾಟೋ ಮೊಸರು ಭಜ್ಜಿ, ಕೋಸ ಸುಗಡ್ಡೆಯ ಪಲ್ಯ, ನಿಂಜಿ ಕಾಯಿಯ ಉಫಿ ಖು ನಕಾಯಿ, ಇಂದು. ಎಂದಿಗಿಂತ "`ಕುಚಿಯಾಗಿದ್ದುವು. ಸಂಜೀವ ಖುದ್ದು ನನ್ನ ಎದುರಿಗೇ ಕುಳಿತು ಬಡಿಸಿ, ನನು ಊಟಮಾಡು ವುದನ್ನು ನೋಡಿ ಸಂತೋಷನಟ್ಟ. ನನ್ನ ಊಟ ಸ್ವಲ್ಪ ಭರ್ಜರಿಯೇ. ಅಂದಿನ ಊಟಕ್ಕೆ ಆತ್ಮೀಯತೆಯ, ಅಂತಃಕರಣ ಅಚ್ಚ ಕಳೆ ಬಂದಿತ್ತು. ನನ್ನ ಬೊಂಬಾಯಿನ ಏಳೆಂಟು ಗೆಳೆಯರು ದಿನ ನಿಲಿಗೆ ಬಂದಿದ್ದರು. ಬಹಳ ತಮಾಷೆಯಾಗಿ ನಾವೆಲ್ಲರೂ ಕುಳಿತುಕೊಂಡು

ಊಟ ಮಾಡಿದೆವು. ದಿನ ಪುನಃ ಬಂದೀತೆ? ಕಳೆದ ದಿನವು ಮರಳಲುಂಟೇ ?

ನನ್ನ ನಿದ್ಯಾರ್ಥಿ ಕಾಂಗ್ರೆಸ್ಸಿ ಸ್ಸಿನ ಸಹಪಾಟ, ಹಾರ್ನ ಹಳಿ ) ರಾಮಸ್ವಾಮಿ, ಚಾ ಬಂದಿಸಿ ಮೂಕನೇ ಆಗಿಬಿಟ್ಟದ್ದ. ನಾವಿಬ್ಬರೂ ಬೆಳಗಾವಿಯಲ್ಲಿ “ಕನ್ನಡದ ಮೈಸೂರು ತುಂಟ” ಗುಂಪಿಗೆ ಸೇರಿದ ಜೋಡಿ. ನಾನಿಲ್ಲದ ಬಂಟ ಬೆಳಗಾವಿಗೆ ತಿರುಗಬೇಕಾಗಿತ್ತು. ಆತ

ಕೊಂಚ ಹಾಗಿದ್ದ ದ್ದು ಏನೂ ೮ಶ್ಚ ರ್ಯವಿಲ್ಲ.

ಶೌರಿ, ತುಂಬು ಉತ್ಸಾಹದಿಂದ, ನಗುನಗುತ್ತಾ » ನನ್ನನ್ನು ಹಾಸ್ಯ ಮಾಡುತ್ತಾ, ಕೆಲವೊಂದು ವೇಳೆ ಗಂಭೀರವಾಗಿ ನಗೆ ಆಗಾಗ್ಗೆ ಕೆಲವು ಸಲಹೆಗಳನ್ಸೀಯುತ್ತಾ, ಚುರುಕು ಮಾತಿನಿಂದ ನೆರೆದ ಗೆಳೆಯರನು ನಗಿ ಸುತ್ತಾ, ನಮ್ಮ ಗುಂಪಿಗೇ ಕಳೆ ಕಟ್ಟಿದ್ದ. ಆದರೂ ಆತನ ಕಣ್ಣು, ಗಳಲ್ಲಿ "ಅಗಲಿ ಕಾಡಿಸುತ್ತಿ ತ್ತು. ಆತ ಹೊರಗೆ ತರಹೆ ಎಂದೂ ತೋರಿಸಿ ಕೊಳ್ಳುವ ವ್ಯಕ್ತಿಯಲ್ಲ, ಗಂಭೀರ ಜೀವ. ತುಂಬಾ ಆತ್ಮೀಯ ಗೆಳೆಯರ ಬಗ್ಯೆ ಲೇಖನಿ ಓಡುವುದಿಲ್ಲ. ಒಂದು ಕ್ಷಣ, ಆತ ನನ್ನ ಆತ್ಮೀಯ ಗೆಳೆಯನೆಂಬುದನ್ನು ಮರೆತು, ಹೇಳುವುದಾದರೆ, ಆತ “ತುಂಬಿದ ಹೊಡ”.

೨೯

ಸಾಗರದಾಚಿ

ನನ್ನ ಹಿರಿಯಣ್ಣ, ರಾಘಣ್ಣ, ನಮ್ಮ ಮನೆಯನರ ಪರವಾಗಿ ಬೀಳ್ಳೊ ಡಲು ಬಂದಿದ್ದರು. ಅವರಂತೂ ಮಾತು ಬಾರದ ಮೂಕರಾಗಿದ್ದರು. ಅವರು ಬೊಂಬಾಯಿಗೆ ಬಂದದ್ದೇ ಹೊಸದು. ನನ್ನ ಗೆಳೆಯರಬಳಗ ಕಂಡು ಅವರು ಚಕಿತರಾಗಿದ್ದರು.

ಮಧ್ಯಾನ್ನ ೧೨ ಘಂಟಿಗೆ ಕೃಷ್ಣಕುಂಜ ಬಿಟ್ಟು, ಕಾಂಡಿವಿಲಿಯಿಂದ ರೈಲುಹತ್ತಿ, ನಮ್ಮ ಹಡಗು ನಿಂತ ನಿಲ್ದಾಣವಾದ 4 ಬ್ಯಾಲರ್ಡ್‌ ಪೀರ್‌?ಗೆ (Ballard Pier) ನಾವು ಬಂದಾಗ ಘಂಟಿ ಆಗಿ ೩೦ ನಿಮಿಷ ಸರದಿತ್ತು. ಬಂದೊಡನೆಯೇ ನನ್ನ ಸಾಮಾನಿನ ತೂಕವಾಗಿ, ನನಗೆ ತೆಗೆದುಕೊಂಡು ಹೋಗಲು ೩೦೦ ಪೌಂಡು ಭಾರ ಅವಕಾಶವಿದೆ ಎಂದು ತಿಳಿಸಲಾಯಿತು. ಆದ್ದ ರಿಂದ ಹೆಚ್ಚಿಗೆ ಲಗ್ಗೇಜ್‌ ಮಾಡಿಸಿ ಹಣಕೊಡುವ ಪ್ರಮೇಯ ಬರಲಿಲ್ಲ.

| ಇಂದು ಹಡಗೇರಿದ ನಾನೆಲ್ಲಾ ನೇರವಾಗಿ ಅಮೇರಿಕಕ್ಕೆ ಹೋಗುವ ವರೇ ಇದ್ದೆವು. ನಮ್ಮೆಲ್ಲರ ವೈದ್ಯ ಪರೀಕ್ಷಯು ಘಂಟಿಗೆ ಪ್ರಾರಂಭವಾ ಯಿತು. ಸರದಿ ಪ್ರಕಾರ ನಮ್ಮ ಪರೀಕ್ಷೆ. ನಾನು ಮೊದಲೇ ಬಂದಿದ್ದುದ ರಿಂದ ೧೫ ನೇಯವನಾಗಿದ್ದೆ. ಕಾಲರಾ ಟೈಫಾಯಿಡ್‌, ವ್ಯಾಕ್ಸಿನೇಷನ್‌, ಸರ್ಟಫಿಕೆಟ್ಟುಗಳನ್ನು ನೋಡಿ ಬಿಟ್ಟು ಬಿಟ್ಟರು. ನಾನು ಟೈಫಾಯಿಡ್‌ ಇನಾಕ್ಯುಲೇಶನ್‌ ಹಾಕಿಸಿಕೊಂಡ ಸರ್ಟಿಫಿಕೆಟ್‌ ತಂದೇ ಇರಲಿಲ್ಲ. ನಾನು ತಂದಿಲ್ಲವೆಂದು ಬರೆದುಕೊಂಡು ನಂತರ ನನ್ನ ಪ್ಯಾಸ್‌ಪೋರ್ಟ್‌ ಮತ್ತು ಅಮೇರಿಕನ್‌ ನೀಸಾ ಪರೀಕ್ಷೆ ಮಾಡಿದರು. ಪೋಲೀಸ್‌ ಸರ್ಟಿಫಿಕೇಟ್‌ ಬೇರೆ ಬೇಕಾಗಿತ್ತು. ನಾನು ಆಗಿನ್ನೂ: ಸಂಸ್ಥಾನದ ಪ್ರ ಜೆಯಾಗಿದ್ದುದರಿಂದ ಅದನ್ನು ತಂದಿರಲಿಲ್ಲ. ಪರೀಕ್ಷೆ ನಡೆಸುತ್ತಿದ್ದ ಅಮೇರಿಕನ್‌ ವೈಸ್‌ ಕಾನ್ಸಲ್‌ ಪೋಲೀಸ್‌ ಸರ್ಬಫಿಕೆಟ್‌ಗೆ ಹೆಚ್ಚು ಗಮನಕೊಡದೆ ವೀಸಾ ನೋಡಿ ನನ್ನ ಕಾಗದಗಳಿಗೆಲ್ಲಾ ರುಜು ಹಾಕಿ ನನಗೆ ಹಡಗುಹತ್ತಲು ಅಪ್ಪಣೆ ಕೊಟ್ಟರು. ನಂತರ ತೆರಿಗೆಯ ಕಚೇರಿಯವರಿಂದ ನನ್ನ ಸಾಮಾನುಗಳ ಪರೀಕ್ಷೆ ನಡೆಯಿತು. ಸಾವಿರ ಪ್ರಯಾಣಿಕರ ಸಾಮಾನುಗಳನ್ನು

೩೦

ಕನಸು-ನನಸು

ನಾಲ್ದಾರು ಘಂಟೆಗಳಲ್ಲಿ ಐದಾರು ನೌಕರರು ಪರೀಕ್ಷಿಸಲು ಸಾಧ್ಯವೇ? ಒಂದೊಂದು ಪೆಟ್ಟಿಗೆಯನ್ನು ಬಾಗಿಲು ತೆಗೆಸಿ ನೋಡಿ, ಎಲ್ಲ ಸಾಮಾನು ಗಳನ್ನು ನಂಬಿಕೆಯ ಮೇಲೆ ಬಿಟ್ಟು ಬಿಡುತ್ತಿದ್ದರು. ಅಕಸ್ಮಾತ್‌ ಏನಾ ದರೂ ಇದ್ದರೂ ಸಣ್ಣದಕ್ಕೆ ಹೆಚ್ಚು ಗಮನವೀಯುತ್ತಿರಲಿಲ್ಲ.

ನನ್ನ ಸಾಮಾನುಗಳಲ್ಲಿ ಕರಹಾಕುವುದೇನೂ ಇರಲಿಲ್ಲ. ಆದರೆ ನಾನಿಟ್ಟು ಕೊಂಡಿದ್ದ ರಾಸ್ಟ್ರಿ ೀಯ ತ್ರಿವರ್ಣ ಧೃಜನನ್ನುಎಲ್ಲಿ ಕಿತ್ತು ಕೊಳ್ಳು ವರೋ ಎಂಬ ಜಭಯೂತು “Ni ಭಾರತಕ್ಕೆ ಪೂರ್ಣ ಸ್ವಾತಂತ್ರ ಬಂದಿರಲಿಲ್ಲ ಕಾರಣ ಬಗ್ಯೆ ಯೋಚನೆ ಕಟ ಆದರೆ ನನಗೆ ಭಯವಾಗುವ ಸಂಭವ ಬರಲಿಲ್ಲ ಇಷ್ಟೊತ್ತಿಗೆ ಗಂಟೆ ಐದಾಗಿತ್ತು.

ನಮ್ಮಣ್ಣ » ಶೌರಿ ಸಂಜೀವ, ರಾಮ, ಎಲ್ಲರೂ ನನ್ನನ್ನು ಆಲಂಗಿಸಿ ಬೀಳ್ಕೊಟ್ಟಿರು. ನಮ್ಮಣ್ಣನಿಗೆ ಅಗಲಿಕೆಯ ದುಃಖ ತಡೆಯಲಾಗಲಿಲ್ಲ. ಗದ್ಗದ ಕಂಠದಿಂದ "ಹೋಗಿಬಾ ಜೋಕೆ? , ಎನ್ನುನ ಮಾತು ಕೇಳಿಸಿತು. ಅಂತಃ ಕರಣ ಉಕ್ಕಿ ಬಂದುದು ಅಸಹಜವೇನೂ ಅಲ್ಲ. ಶೌರಿ ಕ್ಸ ಮುಂದು ಮಾಡಿ, “ಜೈಹಿಂದ್‌? ಎಂದು ಘೋಷಿಸಿದ. ರಾಮ, ಸ್ಫೂರ್ತಿಯಲ್ಲಿ “ಜೈ ಕರ್ನಾಟಿಕ” ಎಂದ. ನಾನು ಕೂಗಿಗೆ «೫ ಕೊಟ್ಟಿ. ಅವರೆಲ್ಲರೂ ತೆರಳಿದರು. ನಾನು ನನ್ನ ಹೊಸ ಜೀವನದ ಸವಿ ಅನುಭವಿ ಸಲು ಹಡಗಿನ ಏಣಿಯನ್ನು ಹತ್ತಿದೆನು.

ಆನವಟ್ಟಿ ಯಲ್ಲಿ ನಾನು ಲೋಯರ್‌ ಸೆಕೆಂಡರಿ ಪರೀಕ್ಷೆಗೆ ಓದುತ್ತಿ ದ್ಹಾಗ ಬಿದ್ದ ಬೆಳಗಾವಿಯಲ್ಲಿ ನೆನಪಾಗಿ, ಬೊಂಬಾಯಿಯಲ್ಲಿ ನನ ಸಾಗಿ, “ನನ್ನ ಕನಸು ಅಂತೂ ನನಸಾಯಿತು” ಎಂದು ಹೇಳಿಕೊಳ್ಳುತ್ತಾ ಸಂಭ್ರಮದಿಂದ ಹಡಗನ್ನೆ ೀರಿದನು.

ಶಿಗಿ

ಹಡಗಿನ ದಿನಚರಿ ೨೬-೧-೪೭ ಬ್ಯಾಲರ್ಡ್‌ ಪೀರ್‌ ಬೊಂಬಾಯಿ.

ನಾನು ಹತ್ತಿದ ಹಡಗಿನ ಹೆಸರು ಎಸ್‌. ಬಸ್‌. ಮೆರೀನ್‌ ಡರ್‌ ಎಂದು. ಅಮೇರಿಕಾದವರು ಯುದ್ಧ ಕಾಲದಲ್ಲಿ, ರಣರಂಗಕ್ಕೆ ಸೈನಿಕರನ್ನು ರವಾನಿಸಲು ಕಟ್ಟದ ಹಡಗು. ಅವರ ಅನುಕೂಲಕ್ಕೆ ತಕ್ಕಂತೆ ಹಡಗನ್ನು ನಿರ್ಮಿಸಲಾಗಿತ್ತು. ಯುದ್ಧಾನಂತರ ಹಡಗನ್ನೇ ಪ್ರವಾಸಿಕರ ಅನು ಕೂಲಕ್ಕೆ ಉಪಯೋಗಿಸುತ್ತಿದ್ದರು,

ಹಡಗನ್ನು ಹತ್ತಿದ ಕೂಡಲೈೆ ಹಡಗಿನ ಸೇವಕನೊಬ್ಬ ಬಂದು ನನ್ನ ಜೊತೆಗೆ ಇಟ್ಟುಕೊಳ್ಳಲು ತಂದ ಸಾಮಾನುಗ್ಗಳನ್ನು ಎತ್ತಿಕೊಂಡು ನನ್ನನ್ನು ನನ್ನ ಕ್ಯಾಬಿನ್‌ (Cabin) ಕರೆದುಕೊಂಡು ಹೋದನು. ನನ್ನ ಉಳಿದ ಸಾಮಾನುಗಳನ್ನು ಇತರರ ಸಾಮಾನುಗಳೊಂದಿಗೆ ಹಡಗಿನ ಗಡಂಗಿನೊಳಗೆ ಹಾಕಿದ್ದರು. ಅವು ಇವೆಯೋ ಇಲ್ಲವೋ, ಎಂಬುದು ನನಗೆ ರ್ಸ್ಕಾರ್ಫ್ಟಾ ಸಿಸಸಕೋನಲ್ಲಿಯೇ ತಿಳಿಯುವುದಾಗಿತ್ತು.

ನನ್ನ ಕ್ಯಾಬಿನ್ಸಿನ ನಂಬರು ೨೫೪. ನನ್ನ ಬರ್ತ್‌ (Berth) ನಂಬರು ೧೮. ನಂಬರು ನೋಡಿದ ಕೂಡಲೇ ನನಗೆ ಸೆರೆಮನೆಯಲ್ಲಿ ಖೈದಿಗಳಿಗೆ ನಂಬರು ಕೊಡುವುದು ಜ್ಞಾ ಸಕ ಬಂದಿತು. ನಮ್ಮ ಕ್ಯಾಬಿನ್ಸಿ ನಲ್ಲಿ ಸುಮಾರು ೨೦ ಜನರಿಗೆ ಇರಲು ಅನುಕೂಲವಿತ್ತು. ಹಡಗಿನಲ್ಲಿ ಜೀವನ ನಡೆಸುವ ಮಟ್ಟಿಗೆ ಜಾಗ ಪ್ರಶಸ್ತವಾಗಿಯೇ ಇತ್ತು ಎಂದು ಹೇಳಬಹುದು. ನಮ್ಮ ಬರ್ತ್‌ನಲ್ಲಿ ಹಾಸಿಗೆಯನ್ನು ಹಾಸಿ, ಎರಡು ಟಿವಲ್ಲುಗಳನ್ನು ಇಟ್ಟಿದ್ದರು. ಹಡಗಿನವರೇ ಇಲ್ಲಿ ಎಲ್ಲ ಪ್ರಯಾಣಿಕರಿಗೂ ಹಾಸಿಗೆಯನ್ನು ಒದಗಿಸಿ ಕೊಡುತ್ತಾರೆ. ಆದ್ದರಿಂದ ನಾನು ತಿಳಿಯದೆ, ತೆಗೆದುಕೊಂಡು ಹೋಗಿದ್ದ ನನ್ನ ಹಾಸಿಗೆಯನ್ನು ಅಲ್ಲಿಯೇ ಸುತ್ತಿಟ್ಟು ಅದನ್ನು ಗಡಂಗಿಗೆ ಸೇರಿಸಿಬಿಟ್ಟಿನು. ಪ್ರಯಾಣಿಕರು ಬಂದು ತಮ್ಮ ತಮ್ಮ ಜಾಗೆಯನ್ನು ಆರಿಸಿಕೊಂಡು ತಾತ್ಯಾ ಲಿಕವಾಗಿ ಅಲ್ಲಿ ನೆಲೆಸುವ ಗದ್ದಲ ನಡೆಡಿತ್ತು.

ಹಡಗಿನ ದಿನಚರಿ

ಹಡಗಿನಲ್ಲಿ ಪ್ರಯಾಣಿಕರಿಗೆ ಮೂರು ಬೇರೆಬೇರೆ ತರಗತಿಗಳಿದ್ದುವು. ಮೊದಲನೆಯ ತರಗತಿಯ ಪ್ರಯಾಣಿಕರು ಬೊಂಬಾಯಿನಿಂದ ಸ್ಯಾನ್‌ಫ್ರಾ ನ್‌ಸಿಸ್ಟೋಗೆ ಹೋಗಲು ೨೧೦೦ ರೂಪಾಯಿಗಳನ್ನು ಕೊಡಬೇಕಿತ್ತು. ಅದಕ್ಕೆ ತಕ್ಕಂತೆ ಅನುಕೂಲಗಳೂ ಇದ್ದವು. ವಾಸಕ್ಕೆ ಪ್ರತ್ಯೇಕವಾಗಿ ಕೊಠಡಿ. ರುಚಿರುಚಿಯಾದ ಹೊಸ ಆಹಾರ, ವಾಸ್ಕ ನೀರಿನಮೇಲಿರುವ ಕೊಠಡಿಗಳಲ್ಲಿ. ಆದ್ದರಿಂದ ಯಾವಾಗಲೂ ಹೊಸಗಾಳಿ ಸೇವನೆಯಾಗುತ್ತಿತ್ತು. ಎರಡನೆ ಮತ್ತು ಮೂರನೆ ತರಗತಿಯ ಕೊಠಡಿಗಳು ನೀರಿನಲ್ಲಿ ಮುಳಗಿದ್ದವು. ನಮಗೆ ಕೃತಕವಾದ ಗಾಳಿ ಬರುತ್ತಿತ್ತು. ಎರಡನೆಯ ತರಗತಿಯ ಪ್ರಯಾಣಿಕರ ಪ್ರವಾಸದ ಖರ್ಚು ೧೭೨೨ ರೂಪಾಯಿ, ಪ್ರಯಾಣಿಕರಿಗೆ, ಮೊದಲನೆ ಯನರಿಗಿಂತ ಆಹಾರದಲ್ಲಿ ವಿಧಗಳು ರುಚಿ ಕಡಿಮೆ. ಮೂರನೆಯ ತರಗತಿಯ ನರಿಗೆ ಸಾದಾ ಆಹಾರ. ಹಡಗಿನ ಕೆಳಗೆ ಪಾತಾಳದಲ್ಲಿ ಅನರ ವಾಸ.

ಎಲ್ಲಾ ತರಗತಿಯ ಪ್ರಯಾಣಿಕರೂ ಬೆಳಗಿನಿಂದ ಹಿಡಿದು ಸಂಜೆಯ: ವರೆಗೂ ಹಡಗಿನ ಮೇಲ್ಭಾಗ (Deck) ದಲ್ಲಿಯೇ ಇರುವುದು ವಾಡಿಕೆ. ರಾತ್ರಿ ಮಾತ್ರ ಮಲಗಲು ತನ್ಮು ತನ್ಮು ಕೊಠಡಿಗಳಿಗೆ ಹೋಗುತ್ತಾರೆ.

ಹಡಗಿನಲ್ಲಿ ಸಂಜೆ ಘಂಟಿಗೇನೇ ಊಟ. ಹೆಡಗಿನಲ್ಲಿರುನ ಮೂರು ಬೇಕೆ ಬೇರೆ ತರಗತಿಗಳಿಗೂ ಬೇರೆ ಬೇರಿ ಊಟದ ಮನೆಗಳಿದ್ದು, ಆಹಾ [ವೂ ಸಹಿತ ಬೇರೆಬೇರೆಯಾಗಿರುತ್ತದೆ. ಅಡುಗೆ ಮನೆಯ ಮೇಲ್ವಿಚಾರಕ ಕಾಲಕ್ಕೆ ಸರಿಯಾಗಿ ಗಂಟೆ ಹೊಡೆದ ಕೂಡಲೇ ಗಂಡಸರು ಹೆಂಗಸರು ಆದಿಯಾಗಿ ಎಲ್ಲರೂ ಹೋಗಬೇಕು... ಮಾಂಸಾಹಾರಿಗಳೂ ಶಾಖಾ ಹಾರಿಗಳೂ ಒಂದೇ ಕಡೆ ಕುಳಿತು ಊಟಮಾಡಬೇಕು. ಆದರೆ ಒಂದೊಂದು ಟೇಬಲ್ಲಿನ ಮೇಲೆ ಶಾಖಾಹಾರಿಗಳಿಗೂ, ಮಾಂಸಾಹಾರಿಗಳಿಗೂ ಬೇರೆ ಬೇರೆ ಬಡಿಸುತ್ತಾರೆ. ಮೈಸೂರಿನ ಸೇಲವರಾದ ನಾವು ಶಾಖಾಹಾರದ ಟೇಬಲ್ಲನ್ನೇ ತೆಗೆದುಕೊಂಡು, ಬರೀ ಶಾಖಾಹಾರದ ಪದಾರ್ಥಗಳನ್ನೇ ಬಡಿಸಿಕೊಳ್ಳು ತ್ತಿದ್ದ ವು. ರೇಷನ್‌ ಊಟ ಮಾಡುತ್ತಿದ್ದ ನಮಗೆ ಅಲ್ಲಿ ಕೊಟ್ಟ ಊಟ

3

ಸಾಗರದಾಚೆ

ಉಂಡುನೋಡಿ ಆಶ್ಚರ್ಯವಾಯಿತು. ಒಬ್ಬೊಬ್ಬರಿಗೆ ಕೊಡುವ ಊಟ ನಾಲ್ಕು ಜನರಿಗಾಗುವಷ್ಟು ಇರುತ್ತಿತ್ತು. ನಮಗೆ ಕೊಡುತ್ತಿದ್ದ ಆಹಾರದ ನಿವರ ರೀತಿ ಇರುತ್ತಿತ್ತು. ಅನ್ನ, ಬೇಯಿಸಿದ ಆಲೂಗಡ್ಡೆ, ಬಟಾಣಿ, ಬೆಣ್ಣೆ, ಗೋಧಿಯ ರೊಟ್ಟಿ (13:೩6), ಜಾಮ್‌ ಬಿಸ್ಕತ್ತು, ಎಪ್ರಿಕಾಟ್‌ ಹಣು , ಟೊಮಾಟೊ ರಸ್ತ ಚೇಸ್‌, ನಸ್‌ಕೀಮ್‌, ಕಿತ್ತಳೆ ಹಣು